ವಿಧಾನಸಭಾ ಚುನಾವಣೆಗೆ ಈಗಾಗಲೇ ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರವನ್ನ ಕೈಗೊಂಡಿದ್ದು, ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಸೇರಿಂತೆ ಹಲವು ಪಕ್ಷಗಳು ರಾಜ್ಯಾದ್ಯಂತ ಅಬ್ಬರದ ಪ್ರಚಾರವನ್ನ ನಡೆಸುತ್ತಿವೆ. ಇತ್ತ ವಿರೋಧ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅರಸೀಕೆರೆ ತಾಲೂಕಿನ ಕೋಡಿಮಠಕ್ಕೆ ಭೇಟಿ ನೀಡಿ ಒಂದು ಗಂಟೆಗೂ ಹೆಚ್ಚು ಕಾಲ ಭವಿಷ್ಯ ಕೇಳಿರುವುದು ಇದೀಗ ಅಚ್ಚರಿಗೆ ಕಾರಣವಾಗಿದೆ. ರಾಜಕೀಯ ಭವಿಷ್ಯ ನುಡಿಯೋ ಮೂಲಕ ಖ್ಯಾತರಾಗಿರೊ ಶ್ರೀಗಳಿಂದ ತಮ್ಮ ಭವಿಷ್ಯ ಕೇಳಿದ್ರಾ ಕೈ ನಾಯಕ…? ಕಾಂಗ್ರೆಸ್ ಸರ್ಕಾರ ಬಂದರೆ ಸಿಎಂ ರೇಸ್ ನಲ್ಲಿ ಸಿದ್ದರಾಮಯ್ಯ ಮುಂಚೂಣಿಯಲ್ಲಿದ್ದಾರೆ.
ಸಿದ್ದರಾಮಯ್ಯ ಭವಿಷ್ಯ ನೋಡಿ ಉಜ್ಚಲ ಭವಿಷ್ಯದ ಶುಭ ಭವಿಷ್ಯಾ ಹೇಳಿದ್ರಾ ಕೋಡಿ ಶ್ರೀಗಳು. ಒಂದು ಗಂಟೆ ಚರ್ಚೆ ಬಳಿಕ ಶ್ರೀಗಳ ಆಶೀರ್ವಾದ ಪಡೆದು ಸಿದ್ದರಾಮಯ್ಯ ಖುಷಿಯಾಗಿ ಹೊರ ಬಂದಿದ್ದಾರೆ. ಸಿದ್ದುಗೆ ಹಾರ ಹಾಕಿ ಸನ್ಮಾನ ಮಾಡಿ ಶುಭ ಹಾರೈಸಿ ಶ್ರೀಗಳು ಕಳುಹಿಸಿದ್ದಾರೆ.ಇನ್ನು ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳಿಂದ ಸಿದ್ದರಾಮಯ್ಯ ಆಶೀರ್ವಾದ ಪಡೆದಿದ್ದು, ಇಂದು ಅರಸೀಕೆರೆ ತಾಲ್ಲೂಕಿನ ಗುತ್ತಿನಕೆರೆ ಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಸಿದ್ದು ಆಗಮಿಸಿದ್ದಾರೆ. ಸದ್ಯ ಕಾರ್ಯಕ್ರಮ ಮುಗಿಸಿ ಮಠಕ್ಕೆ ಆಗಮಿಸಿ ಊಟ ಮಾಡಿ ಶ್ರೀಗಳ ಜೊತೆ ಸಿದ್ದರಾಮಯ್ಯ ಚರ್ಚೆ ನಡೆಸಿದ್ದಾರೆ.