ಹುಕ್ಕೇರಿ ಮತಕ್ಷೇತ್ರ (Hukkeri Constituency) ದಿಂದ ಸ್ಪರ್ಧಿಸಲು ಬಿಜೆಪಿ ಟಿಕೆಟ್ ಬಯಸಿದ್ದ ಮಾಜಿ ಸಚಿವ ಶಶಿಕಾಂತ್ ನಾಯ್ಕ್ (Shashikant Naik) ಬಿಜೆಪಿಗೆ ಗುಡ್ ಬೈ ಹೇಳಲು ಮುಂದಾಗಿದ್ದಾರೆ. ಕತ್ತಿ ಕುಟುಂಬದ ಕಿರುಕುಳಕ್ಕೆ ಬೇಸತ್ತು ರಾಜೀನಾಮೆ ನೀಡುತ್ತಿದ್ದೇನೆ ಎಂದು ಮಾಜಿ ಸಚಿವ ಶಶಿಕಾಂತ್ ನಾಯ್ಕ್ ತಿಳಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ಇಪ್ಪತ್ತು ವರ್ಷಗಳಿಂದ ಬಿಜೆಪಿ (BJP) ಯಲ್ಲಿ ಕೆಲಸ ಮಾಡುತ್ತ ಬಂದಿದ್ದೇನೆ. ಜಿಲ್ಲೆಯಲ್ಲಿ ಬಿಜೆಪಿಯನ್ನು ಹಳ್ಳಿಮಟ್ಟದಿಂದ ಬೆಳೆಸಲು ಬಾಬಾಗೌಡ ಪಾಟೀಲ್ ಜೊತೆ ಕೆಲಸ ಮಾಡಿದ್ದೇನೆ. ಕೇವಲ ಒಂದು ಸಲ ಮಾತ್ರ ನನಗೆ ಹುಕ್ಕೇರಿ ಮತಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಕೊಟ್ಟಿದೆ. ಆ ವೇಳೆ ದಿ.ಉಮೇಶ್ ಕತ್ತಿ (Umesh Katti) ವಿರುದ್ಧ ಗೆದ್ದು ಮಂತ್ರಿ ಕೂಡ ಆಗಿದ್ದೆ. 243 ಕೋಟಿ ರೂಪಾಯಿ ಹಣ ಬಿಡುಗಡೆ ಸುವರ್ಣ ವಿಧಾನಸೌಧ ನಿರ್ಮಾಣ ಮಾಡಿದ್ದೇನೆ. ಅನೇಕ ನೀರಾವರಿ ಯೋಜನೆ ಸೌಲಭ್ಯ ಮಾಡಿದ್ದೇನೆ ಎಂದರು.