ದೇಶದ ಇತಿಹಾಸದಲ್ಲೇ ಸಿಎಂ ಲೋಕಾರ್ಪಣೆ ಮಾಡಿದ ಬಳಿಕ ಎರಡನೇ ಬಾರಿ ಲೋಕಾರ್ಪಣೆ ಮಾಡಿದ್ದುನ್ನು ಎಲ್ಲೂ ನೋಡಿಲ್ಲ. ಆ ಹೆಣ್ಣುಮಗಳದ್ದು ರೂಪ ಅಷ್ಟೇ, ಗುಣಗಳೇ ಬೇರೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಂತಿಬಸ್ತವಾಡ ಗ್ರಾಮದಲ್ಲಿ ಎಸ್ಸಿ ಎಸ್ಟಿ ಸಮಾವೇಶದಲ್ಲಿ ಮಾತನಾಡಿದ ಅವರು, ನಾವು ಹೆಣ್ಣುಮಕ್ಕಳು, ನಿಮ್ಮ ಮನೆಮಗಳು, ನಿಮ್ಮ ಮನೆಯ ಸೊಸೆ ಎಂದು ಹೇಳಿಕೊಂಡು ಬರುತ್ತಾರೆ, ಅವರನ್ನು ನಂಬಬೇಡಿ. ಅವರದ್ದು ಹೆಣ್ಣಿನ ರೂಪವಷ್ಟೇ, ಗುಣಗಳಲ್ಲ ಎಂದಿದ್ದಾರೆ.