ಬೆಂಗಳೂರಿನಲ್ಲಿ (Bengaluru) ಸೋಮವಾರ ಭಾರೀ ಮಳೆ (Rain) ಸುರಿದ ಪರಿಣಾಮ ಪಿಎಸ್ ಕಾಲೇಜ್ ಬಳಿಯ ವೀರಭದ್ರನಗರದ ಸ್ಲಮ್ನಲ್ಲಿ 5 ಮನೆಗಳು ಮತ್ತು ಕಾಂಪೌಂಡ್ ಗೋಡೆ ಕುಸಿದು ಪಕ್ಕದ ಅಪಾರ್ಟ್ಮೆಂಟ್ನಲ್ಲಿ (Apartment) ನಿಲ್ಲಿಸಿದ್ದ ಕಾರುಗಳು ಸಂಪೂರ್ಣ ಜಖಂಗೊಂಡಿದೆ.
ರಿಂಗ್ ರೋಡ್ನ ವೀರಭದ್ರೇಶ್ವರ ನಗರದಲ್ಲಿ (Veerabhadreshwara Nagar) ಈ ಘಟನೆ ನಡೆದಿದ್ದು, ವಸುಂಧರಾ ಕೃತಿಕಾ ಅಪಾರ್ಟ್ಮೆಂಟ್ನ ತಡೆಗೋಡೆ ಸಮೇತ ಮನೆ ಸಂಪೂರ್ಣ ನೆಲಸಮವಾಗಿದೆ. ಅಲ್ಲದೇ ತಡೆಗೋಡೆ ಪಕ್ಕದಲ್ಲಿ ನಿಲ್ಲಿಸಿದ್ದ ಎರಡು ಕಾರುಗಳು ಸಂಪೂರ್ಣ ಜಖಂಗೊಂಡಿದ್ದು, ಮತ್ತೆರಡು ಕಾರಗಳಿಗೂ ಸಹ ಹಾನಿಯಾಗಿದೆ.