ಸಾಹಸ ಸನ್ನಿವೇಶದಲ್ಲಿ ಬಾಂಬ್ ಬ್ಲಾಸ್ಟಿಂಗ್ ಮಾಡುವಾಗ ಸಂಜಯ್ ಗಾಯಗೊಂಡಿದ್ದಾರೆ ಎನ್ನಲಾಗುತ್ತಿದೆ. ಕೆಡಿ ಚಿತ್ರದ ಚಿತ್ರೀಕರಣವು ಮಾಗಡಿ ರೋಡ್ ನಲ್ಲಿ ಹಾಕಲಾದ ಸೆಟ್ ನಲ್ಲಿ ನಡೆಯುತ್ತಿತ್ತು. ಈ ವೇಳೆ ಬಾಂಬ್ ಬ್ಲಾಸ್ಟ್ ಮಾಡುವಾಗ ಸಂಜಯ್ ದತ್ ಅವರ ಮೊಣಕೈ ಹಾಗೂ ಮುಖಕ್ಕೆ ಗಾಯವಾಗಿದೆ.
ಎಷ್ಟೇ ಮುತುವರ್ಜಿವಹಿಸಿದರೂ ಇಂತಹ ಅವಘಡಗಳು ನಡೆಯುತ್ತಲೇ ಇವೆ. ಕೆಡಿ ಸಿನಿಮಾ ಕೂಡ ಅದಕ್ಕೆ ಹೊರತಾಗಲಿಲ್ಲ. ಸಂಜಯ್ ದತ್ ಗಾಯಗೊಳ್ಳುತ್ತಿದ್ದಂತೆಯೇ ಶೂಟಿಂಗ್ ನಿಲ್ಲಿಸಲಾಗಿದೆ ಎನ್ನುವ ಮಾಹಿತಿ ಇದೆ.
ಸಂಜಯ್ ಮತ್ತು ಧ್ರುವ ನಡುವೆ ಸಾಹಸ ಸನ್ನಿವೇಶದ ಚಿತ್ರೀಕರಣವನ್ನು ನಿರ್ದೇಶಕರು ಸೆರೆ ಹಿಡಿಯುತ್ತಿದ್ದು ಈ ವೇಳೆ ಅವಘಡ ಸಂಭವಿಸಿದೆ. ಘಟನೆ ಬಳಿಕ ಶೂಟಿಂಗ್ ನಿಲ್ಲಿಸಲಾಗಿದ್ದು, ಘಟನೆಯ ನಂತರ ಸಂಜಯ್ ದತ್ ಮುಂಬೈಗೆ ತೆರಳಿದ್ದಾರೆ ಎನ್ನಲಾಗುತ್ತಿದೆ.