ಅಂತಾರಾಷ್ಟ್ರೀಯವಾಗಿ ಖಾದ್ಯ ತೈಲಗಳ ಬೆಲೆ ಕಡಿಮೆಯಾಗಿರುವುದರಿಂದ ಗ್ರಾಹಕರ ಹಿತದೃಷ್ಟಿಯಿಂದ ದೇಶೀಯ ವಾಗಿಯೂ ಬೆಲೆ ಇಳಿಕೆ ಮಾಡುವಂತೆ ಖಾದ್ಯತೈಲ (edible oils) ಕಂಪನಿಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಅದರ ಬೆನ್ನಲ್ಲೇ ಕೆಲ ಕಂಪನಿಗಳು ದರ ಇಳಿಕೆಯ ನಿರ್ಧಾರ ಪ್ರಕಟಿಸಿವೆ. 2021-22ನೇ ಸಾಲಿನಲ್ಲಿ 1.75 ಲಕ್ಷ ಕೋಟಿ ರು. ಮೌಲ್ಯದ ಖಾದ್ಯ ತೈಲನ್ನು ಭಾರತದ ಕಂಪನಿಗಳು ಆಮದು ಮಾಡಿಕೊಂಡಿವೆ.
ಈ ಕಂಪನಿಗಳು ಪಾಮ್ ಎಣ್ಣೆಯನ್ನು (Palm Oil) ಮಲೇಷ್ಯಾ (Malaysia) ಮತ್ತು ಇಂಡೋನೇಷ್ಯಾದಿಂದ (Indonesia) ಹಾಗೂ ಸೋಯಾಬೀನ್ ಎಣ್ಣೆಯನ್ನು (soybean) ಅರ್ಜೇಂಟೀನಾ (Argentina) ಮತ್ತು ಬ್ರೆಜಿಲ್ನಿಂದ (Brazil) ಆಮದು ಮಾಡಿಕೊಳ್ಳುತ್ತವೆ. ಈ ತೈಲಗಳ ಬೆಲೆ ಅಂತಾರಾಷ್ಟ್ರೀಯವಾಗಿ ಇಳಿಕೆಯಾಗಿರುವುದರಿಂದ ಬೆಲೆ ಇಳಿಕೆ ಮಾಡಲು ಸರ್ಕಾರ ಸೂಚಿಸಿದೆ. ಧಾರಾ ಹೆಸರಿನಲ್ಲಿ ಅಡಿಗೆಎಣ್ಣೆಯನ್ನು ಮಾರಾಟ ಮಾಡುವ ಮದರ್ ಡೈರಿ ಈಗಾಗಲೇ ಬೆಲೆಯನ್ನು 15ರಿಂದ 20 ರು. ಇಳಿಕೆ ಮಾಡಿರುವುದಾಗಿ ಘೋಷಿಸಿದೆ.