ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bangalore) ಮಹಿಳೆಯೊಂದಗೆ ಅನೈತಿಕ ಸಂಬಂಧ(Immoral relationship) ಮುಂದುವರೆಸುವಂತೆ ಒತ್ತಾಯಿಸಿ ಅಶ್ಲೀಲ ಫೋಟೋ ಹಾಗೂ ವೀಡಿಯೋವನ್ನು ತೋರಿಸಿ ಬೆದರಿಸುತ್ತಿದ್ದ ವ್ಯಕ್ತಿಯನ್ನು ಮಾತನಾಡುವುದಾಗಿ ಕರೆಸಿ ಆರ್ಎಂಸಿ ಯಾರ್ಡ್ ಮಾರುಕಟ್ಟೆಯ ಬಳಿ ಚಾಕು ಇರಿದು ಕೊಲೆ ಮಾಡಿರುವ ಘಟನೆ ನಡೆದಿದೆ. ಬೆಂಗಳೂರಿನಲ್ಲಿ ಅನೈತಿಕ ಸಂಬಂಧ ಮುಂದುವರೆಸಲು ಹೋಗಿ ಕೊಲೆಯಾದ ವ್ಯಕ್ತಿಯನ್ನು (Umapathi)ಉಮಾಪತಿ (47) ಎಂದು ಗುರುತಿಸಲಾಗಿದೆ. ಈತನು ಹಲವು ದಿನಗಳಿಂದ ಬೆಂಗಳೂರಿನ(Bangalore) ಮಹಿಳೆಯೊಂದಿಗೆ ಅನೈತಿಕವಾಗಿ ಸಂಬಂಧವನ್ನು ಹೊಂದಿದ್ದನು.
ಆದರೆ, ಆತನ ಸಂಬಂಧದ ವಿಚಾರ ಮನೆಯವರಿಗೆ ಗೊತ್ತಾಗಿದ್ದು, ಇನ್ನುಮುಂದೆ ನಮ್ಮ ಸಂಬಂಧವನ್ನು ಬಿಟ್ಟುಬಿಡೋಣ ಎಂದು ಹೇಳಿದ್ದಾಳೆ. ಆದರೆ, ಇದಕ್ಕೊಪ್ಪದ ಅಸಾಮಿ ಮಹಿಳೆಗೆ(women) ಪದೇ ಪದೇ ಬೇಡಿಕೆಯಿಟ್ಟು, ಆಕೆಯನ್ನು ಪುಸಲಾಯಿಸಿ ತನ್ನ ಚಪಲವನ್ನು ತೀರಿಸಿಕೊಂಡಿದ್ದಾನೆ. ಜೊತೆಗೆ, ಈಕೆ ತನ್ನನ್ನು ಬಿಟ್ಟು ಹೋಗುವ ನಿರ್ಧಾರ ಮಾಡಿದ್ದಾಳೆಂಬ ನಿರ್ಧಾರ ತಿಳಿಯುತ್ತಿದ್ದಂತೆ ಆಕೆಯೊಂದಿಗೆ ತಾನಿರುವ ಬಗ್ಗೆ ಫೋಟೋ ಹಾಗೂ ವೀಡಿಯೋ ಮಾಡಿಕೊಂಡಿದ್ದಾನೆ.
ಆರ್ಎಂಸಿ ಯಾರ್ಡ್ ಬಳಿ ಬಂದಿದ್ದ ಮಹಿಳೆಯ ಕಡೆಯವರು ಹಾಗೂ ಉಮಾಪತಿ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಮಹಿಳೆಯ ಎಲ್ಲ ಫೋಟೋ, ವಿಡಿಯೋ ಡಿಲೀಟ್ ಮಾಡಲು ಒಪ್ಪದ ಆತನಿಗೆ ಥಳಿಸಿದ್ದಾರೆ. ಆಗಲೂ ಅವರ ಮಾತನ್ನು ಕೇಳದ ಉಮಾಪತಿಗೆ ಚಾಕುವಿನಿಂದ ಚುಚ್ಚಿದ್ದಾರೆ. ಸ್ಥಳದಲ್ಲಿಯೇ ತೀವ್ರ ರಕ್ತಸ್ರಾವ ಉಂಟಾಗಿ ನರಳಾಡುತ್ತಿದ್ದ ಉಮಾಪತಿ ರಕ್ತದ ಮಡುವಿನಲ್ಲಿಯೇ ಒದ್ದಾಡಿ ಪ್ರಾಣ ಬಿಟ್ಟಿದ್ದಾನೆ. ಈ ಪ್ರಕರಣಕ್ಕೆ ಕುರಿತಂತೆ ಇಬ್ಬರು ಕೊಲೆ ಆರೋಪಿಗಳಾದ ನರಸಿಂಹಯ್ಯ ಹಾಗೂ ಸುನೀಲ ಎಂಬುವವರನ್ನು ಆರ್ಎಂಸಿ ಯಾರ್ಡ್ ಪೊಲೀಸರು ಬಂಧಿಸಿದ್ದಾರೆ.