ಪ್ರೀತಿಸಿ ಮದುವೆಯಾದರು ಎಂಬ ಒಂದೇ ಕಾರಣಕ್ಕೆ ಬಾವನನ್ನೇ ಬಾಮೈದ ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆಗೈದಿರುವ (Murder) ಘಟನೆ ರಾಮನಗರ (Ramanagara) ತಾಲೂಕಿನ ಕೆಜಿ ಹೊಸಹಳ್ಳಿ (K.G.Hosahalli) ಗ್ರಾಮದಲ್ಲಿ ನಡೆದಿದೆ.
ಕೆಜಿ ಹೊಸಹಳ್ಳಿ ಗ್ರಾಮದ ಅಶ್ವತ್ಥ್ ಗೌಡ(28) ಕೊಲೆಯಾದ ದುರ್ದೈವಿ. ಕೆಜಿ ಹೊಸಳ್ಳಿ ಗ್ರಾಮದ ಅಶ್ವತ್ಥ್ ಗೌಡ ಹಾಗೂ ಚನ್ನಪಟ್ಟಣ (Channapatna) ನಗರದ ಮಹದೇಶ್ವರ ಬಡಾವಣೆಯ ಸಹನಾ, ದೂರದ ಸಂಬಂಧಿಗಳು. ಅಲ್ಲದೇ ಒಂದೇ ಜಾತಿಯವರಾಗಿದ್ದರು. ಹೀಗಾಗಿ ಕಳೆದ ಏಳು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಪ್ರೀತಿಯ (Love) ವಿಚಾರ ಎರಡೂ ಕುಟುಂಬದವರಿಗೂ ಗೊತ್ತಿತ್ತು. ವಿರೋಧದ ನಡುವೆ ಕಳೆದ ಎರಡು ತಿಂಗಳ ಹಿಂದೆ ಅಶ್ವತ್ಥ್ ಹಾಗೂ ಸಹನಾ ಧರ್ಮಸ್ಥಳದಲ್ಲಿ ಮದುವೆಯಾಗಿದ್ದರು. ನಂತರ ಇಬ್ಬರೂ ಕೂಡ ಕೆಜಿ ಹೊಸಹಳ್ಳಿ ಗ್ರಾಮದಲ್ಲಿ ವಾಸವಾಗಿದ್ದರು.