ಬಸವನಾಡಿನಿಂದಲೇ ಪ್ರಧಾನಿ ಮೋದಿ (Narendra Modi) ರಾಜ್ಯದ ಸಾರ್ವತ್ರಿಕ ಚುನಾವಣೆಯ ಅಖಾಡಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದ್ದಾರೆ. ಮೊದಲ ಹಂತವಾಗಿ ಬಸವಣ್ಣನ ಕರ್ಮಭೂಮಿ ಬೀದರ್ನಿಂದ ಚುನಾವಣೆಗೆ ಮೋದಿ ಕೇಸರಿ ರಣ ಕಹಳೆ ಮೊಳಗಿಸಲಿದ್ದಾರೆ. ಕಲ್ಯಾಣದ ಅನುಭವ ಮಂಟಪವನ್ನು ಕೇಂದ್ರ ಬಿಂದುವಾಗಿಟ್ಟುಕೊಂಡು ಲಿಂಗಾಯತರ ಒಲೈಕೆ ಹಾಗೂ ಡ್ಯಾಮೇಜ್ ಕಂಟ್ರೋಲ್ಗೆ ಮುಂದಾಗಿದ್ದಾರೆ. ಕಲ್ಯಾಣ ಕರ್ನಾಟಕ ಟಾರ್ಗೆಟ್ ಮಾಡಿರುವ ಮೋದಿ ಶತಾಯಗತಾಯ 25+ ಸೀಟು ಗೆಲ್ಲಲು ರಣತಂತ್ರ ರೂಪಿಸಿದ್ದಾರೆ.
ಬೆಳಗ್ಗೆ 8:20ಕ್ಕೆ ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಬೀದರ್ಗೆ ಮೋದಿ ಪ್ರಯಾಣ ಬೆಳೆಸಲಿದ್ದಾರೆ. 10:20ಕ್ಕೆ ಬೀದರ್ ಏರಬೇಸ್ಗೆ ಆಗಮಿಸಲಿದ್ದಾರೆ. 10:25ಕ್ಕೆ ಹೆಲಿಕಾಪ್ಟರ್ ಮೂಲಕ ಹುಮ್ನಾಬಾದ್ ಹೆಲಿಪ್ಯಾಡ್ಗೆ ಬರಲಿದ್ದಾರೆ. ಬೆಳಗ್ಗೆ 11ಕ್ಕೆ ಬೃಹತ್ ಬಹಿರಂಗ ಸಮಾವೇಶದಲ್ಲಿ ಮೋದಿ ಪಾಲ್ಗೊಳ್ಳಲಿದ್ದಾರೆ. ನಂತರ ಹುಮ್ನಾಬಾದ್ನಿಂದ ವಿಜಯಪುರಕ್ಕೆ ತೆರಳಲಿದ್ದಾರೆ.