ದುನಿಯಾ ವಿಜಯ್ ನಟನೆಯ ‘ಮಾಸ್ತಿಗುಡಿ’ ಸಿನಿಮಾ ಶೂಟಿಂಗ್ ವೇಳೆ ನಡೆದ ದುರ್ಘಟನೆ ಎಂದಿಗೂ ಮರೆಯುವಂಥದ್ದಲ್ಲ. ಚಿತ್ರೀಕರಣದ ವೇಳೆ ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಬಿದ್ದ ಇಬ್ಬರು ಖಳನಟರು ಮೃತಪಟ್ಟಿದ್ದು ಘಟನೆ ಬಗ್ಗೆ ಥ್ರಿಲ್ಲರ್ ಮಂಜು ಮಾತನಾಡಿದ್ದಾರೆ.
‘ನಾವು ಎಷ್ಟೇ ಮುನ್ನೆಚ್ಚರಿಕೆ ತೆಗೆದುಕೊಂಡರೂ ಅವಘಡ ಸಂಭವಿಸುತ್ತದೆ. ಚಿಕ್ಕ-ಪುಟ್ಟ ಶಾಟ್ಸ್ಗೆ ನಾವು ಹೆಚ್ಚು ಎಚ್ಚರಿಕೆ ವಹಿಸುತ್ತೇವೆ. ಹಾಗಿರುವಾಗ ದೊಡ್ಡ ಸಾಹಸ ದೃಶ್ಯಗಳ ಬಗ್ಗೆಯೂ ನಾವು ಪ್ರಿಕಾಷನ್ ತೆಗೆದುಕೊಂಡಿರುತ್ತೇವೆ. ಒಮ್ಮೊಮ್ಮೆ ನಡೆಯಬಾರದ್ದು ನಡೆದು ಹೋಗುತ್ತದೆ’ ಎಂದು ಅಂದಿನ ಘಟನೆಯನ್ನು ಮೆಲುಕು ಹಾಕಿದ್ದಾರೆ.