ನಾಯಕ ಶಿಖರ್ ಧವನ್ (86* ರನ್, 56 ಎಸೆತ, 9 ಫೋರ್, 3 ಸಿಕ್ಸರ್) ಮತ್ತು ಪ್ರಭ್ಸಿಮ್ರನ್ ಸಿಂಗ್ (60 ರನ್, 34 ಎಸೆತ, 7 ಫೋರ್, 3 ಸಿಕ್ಸರ್) ಅವರ ಸ್ಪೋಟಕ ಬ್ಯಾಟಿಂಗ್ ಹಾಗೂ ನೇಥನ್ ಎಲೀಸ್ (30ಕ್ಕೆ 4) ಅವರ ಮಾರಕ ಬೌಲಿಂಗ್ ದಾಳಿಯ ಬಲದಿಂದ ಮಿಂಚಿದ ಪಂಜಾಬ್ ಕಿಂಗ್ಸ್ ತಂಡ, 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಬಲಿಷ್ಠ ರಾಜಸ್ಥಾನ್ ರಾಯಲ್ಸ್ ತಂಡವನ್ನು 5 ರನ್ಗಳಿಂದ ಮಣಿಸಿ, ಟೂರ್ನಿಯಲ್ಲಿ ಸತತ ಜಯ ದಾಖಲಿಸಿದೆ.
ಇಲ್ಲಿನ ಬರ್ಸಾಪರ ಕ್ರಿಕೆಟ್ ಕ್ರೀಡಾಂಗಣದಲ್ಲಿ ಬುಧವಾರ ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಪಂಜಾಬ್ ತಂಡ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 197 ರನ್ಗಳ ಬೃಹತ್ ಮೊತ್ತ ಪೇರಿಸಿತು. ಇದಕ್ಕೆ ಪ್ರತಿಯಾಗಿ ಇನಿಂಗ್ಸ್ ಆರಂಭಿಸಿದ ರಾಜಸ್ಥಾನ 20 ಓವರ್ಗಳಲ್ಲಿ7 ವಿಕೆಟ್ ಕಳೆದುಕೊಂಡು 192 ರನ್ ಗಳಿಸಲಷ್ಟೇ ಶಕ್ತಗೊಂಡು ನಿರಾಶೆಯ ಕಡಲಲ್ಲಿ ಮುಳುಗಿತು.