ಈ ಬಾರಿಯ ಚುನಾವಣೆ ವಿಶೇಷ ಮತ್ತು ವಿಭಿನ್ನವಾಗಿದೆ. ಹೀಗಾಗಿ ರಾಜ್ಯದ ಎಲ್ಲಾ ಕ್ಷೇತ್ರಗಳ ಮತದಾರರು ಅಮಿಷಗಳಿಗೆ ಒಳಗಾಗದೇ ಯೋಗ್ಯವಾದ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕೆಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ಹಣ,ತೋಳ್ಬಲ ಪ್ರಭಾವ ಕುರಿತು ಪ್ರತಿಕ್ರಿಯೆ ನೀಡಿದರು. ದುಡ್ಡು ಕೊಟ್ಟು ಆಯ್ಕೆಯಾದ ನಂತರ ಯಾವನದು ಏನು, ಯಾವ ಮಕ್ಕಳ ಬೀಡೆ. ಏನು ಅನ್ನುವ ಹಂತಕ್ಕೆ ಬರುತ್ತದೆ ಎಂದು ಮಾರ್ಮಿಕವಾಗಿ ನುಡಿದರು.