2024ರ ಆರ್ಥಿಕ ವರ್ಷದ ಮೊದಲ ದಿನವೇ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ (Commercial Cylinder) ಬೆಲೆಗಳಲ್ಲಿ (Price) ಭಾರೀ ಇಳಿಕೆ ಕಂಡಿದ್ದು, 92 ರೂ. ರಷ್ಟು ಕಡಿತಗೊಳಿಸಲಾಗಿದೆ.
ಈ ಹಿಂದೆ ಮಾರ್ಚ್ನಲ್ಲಿ ಸರ್ಕಾರವು ವಾಣಿಜ್ಯ ಗ್ಯಾಸ್ ಸಿಲಿಂಡರ್ನ ಬೆಲೆಗಳನ್ನು 350 ರೂ. ಹೆಚ್ಚಿಸಿತ್ತು. ಆದರೆ ಶನಿವಾರ 92 ರೂ. ಇಳಿಕೆಯಾಗಿದೆ.
ಆದರೆ ದೇಶೀಯ ಎಲ್ಪಿಜಿ ಗ್ಯಾಸ್ ಗ್ರಾಹಕರಿಗೆ ಬೆಲೆ ಪರಿಷ್ಕರಣೆಯಾಗಿಲ್ಲ. 14.2 ಕೆಜಿ ಗ್ಯಾಸ್ ಸಿಲಿಂಡರ್ಗಳ ದರ ಕಳೆದ ತಿಂಗಳಿನಂತೆಯೇ ಇದೆ. ಕಳೆದ ತಿಂಗಳು ಕೇಂದ್ರವು ಗೃಹಬಳಕೆಯ ಅಡುಗೆ ಅನಿಲದ ಬೆಲೆಯನ್ನು 50 ರೂ. ಹೆಚ್ಚಿಸಿತ್ತು