ಶ್ರೀಕಾಂತ್ ಒಡೆಲಾ ನಿರ್ದೇಶನದಲ್ಲಿ ನ್ಯಾಚುರಲ್ ಸ್ಟಾರ್ ನಾನಿ, ಕೀರ್ತಿ ಸುರೇಶ್ ನಟನೆಯ ‘ದಸರಾ’ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಟೀಸರ್ ಮೂಲಕ ವರ್ಲ್ಡ್ ವೈಡ್ ಸಖತ್ ಸೌಂಡ್ ಮಾಡಿರುವ ಈ ಚಿತ್ರ ನಾನಿ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಪ್ರಾಜೆಕ್ಟ್. ಈ ಚಿತ್ರದಲ್ಲಿ ಕನ್ನಡದ ನಟ ದೀಕ್ಷಿತ್ ಶೆಟ್ಟಿ ನ್ಯಾಚುರಲ್ ಸ್ಟಾರ್ ಜೊತೆ ಸ್ಕ್ರೀನ್ ಶೇರ್ ಮಾಡಿರೋದು ವಿಶೇಷವಾಗಿದೆ.
ನಾನಿ ಸರ್ ಪ್ರೊಡಕ್ಷನ್ ಹೌಸ್ ನಡಿ ನಿರ್ಮಾಣವಾದ ‘ಮೀಟ್ ಕ್ಯೂಟ್’ ವೆಬ್ ಸೀರೀಸ್ ನಲ್ಲಿ ನಟಿಸಿದ್ದೆ. ವೆಬ್ ಸೀರೀಸ್ ಸಹ ನಿರ್ದೇಶಕರಾದ ವಿನಯ್ ನನ್ನ ಅಭಿನಯ ನೋಡಿ ದಸರಾ ಸಿನಿಮಾಗೆ ರೆಫರ್ ಮಾಡಿದ್ರು. ನಾನಿ ಸರ್ ಕೂಡ ವೆಬ್ ಸೀರೀಸ್ ನಲ್ಲಿ ನನ್ನ ಅಭಿನಯ ನೋಡಿ ಮೆಚ್ಚಿಕೊಂಡಿದ್ರು ದಸರಾ ಸಿನಿಮಾದಲ್ಲಿ ನಟಿಸೋ ಅವಕಾಶ ಸಿಕ್ತು ಎಂದಿದ್ದಾರೆ ದೀಕ್ಷಿತ್ ಶೆಟ್ಟಿ.