ಹಳೇ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನ ಮೇಲೆ ಕಟ್ಟಿಗೆಯಿಂದ ಹಲ್ಲೆ ನಡೆಸಿದ ಪರಿಣಾಮ ವ್ಯಕ್ತಿಯೊಬ್ಬ ಗಂಭೀರವಾಗಿ ಗಾಯಗೊಂಡು ಕಿಮ್ಸ್ ಆಸ್ಪತ್ರೆಗೆ ದಾಖಲಾದ ಘಟನೆ ಗಾಮನಗಟ್ಟಿಯಲ್ಲಿ ತಡರಾತ್ರಿ ನಡೆದಿದೆ. ಗಾಮನಗಟ್ಟಿಯ ನಿವಾಸಿ ಹನುಮಂತ ಎಂಬುವನ ಮೇಲೆ ತಾನು ವಾಸವಿದ್ದ ಓಣಿಯ ಕೆಲವು ನಿವಾಸಿಗಳು ಕ್ಷುಲ್ಲಕ ವಿಚಾರಕ್ಕೇ ಹನುಮಂತನ ಜೊತೆ ಜಗಳ ತೆಗೆದಿದ್ದಾರೆ.ಜಗಳ ಅತಿರೇಕಕ್ಕೆ ಹೋಗುತ್ತಿದ್ದ ಹಾಗೆ ಕಟ್ಟಿಗೆಯಿಂದ ಹನುಮಂತನ ತಲೆಗೆ ಹೊಡೆದ ಪರಿಣಾಮ ಹನುಮಂತ ಸ್ಥಳದಲ್ಲೇ ಕುಸಿದುಬಿದ್ದಿದ್ದಾನೆ.
ಕೂಡಲೇ ಆತನ ಕುಟುಂಬಸ್ಥರು ಹನುಮಂತನನ್ನ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದ್ದು ಸದ್ಯ ಆತನ ಸ್ಥಿತಿ ಗಂಭೀರವಾಗಿದ್ದು,ಕಿಮ್ಸ್ ನ ಐಸಿಯು ನಲ್ಲಿ ಚಿಕಿತ್ಸೆ ಮುಂದುವರೆದಿದ್ದು.ಘಟನಾ ಸ್ಥಳಕ್ಕೆ ಹುಬ್ಬಳ್ಳಿಯ ನವನಗರ ಠಾಣೆಯ ಪೊಲೀಸರು ಭೇಟಿ ನೀಡಿ ಘಟನೆಯ ಕುರಿತು ಹೆಚ್ಚಿನ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ.