ಇನೋವಾ ಕಾರಲ್ಲಿ ಅನಧಿಕೃತವಾಗಿ ಸಾಗಿಸ್ತಿದ್ದ 3 ಲಕ್ಷ ಹಣವನ್ನು ಬೆಂಗಳೂರಿನ ರಾಜಗೋಪಾಲ್ ನಗರ ಪೊಲೀಸರು ಸೀಜ್ ಮಾಡಿದ್ದಾರೆ. ಮಂಗಳವಾರ ಮಧ್ಯಾಹ್ನ 3ಗಂಟೆ ಸುಮಾರಿಗೆ ಪೀಣ್ಯಾ 2ನೇ ಹಂತದ ಬಳಿ ಹಣ ಹಣವನ್ನು ಸಾಗಿಸಲಾಗುತ್ತಿತ್ತು. ಈ ವೇಳೆ ವಾಹನ ಪರಿಶೀಲನೆ ಮಾಡಿದಾಗ ಯಾವುದೇ ದಾಖಲೆ ಇಲ್ಲದ 3 ಲಕ್ಷ ಹಣ ಪತ್ತೆಯಾಗಿದೆ. ಸದ್ಯ ಮೂರು ಲಕ್ಷ ನಗದು ಹಾಗೂ ಇನೋವಾ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದು, ರಾಜಗೋಪಾಲ ನಗರ ಠಾಣೆಯಲ್ಲಿ ಈ ಸಂಬಂಧ ಎನ್ ಸಿ ಆರ್ ದಾಖಲಾಗಿದೆ. ಇನ್ನೂ ಚುನಾವಣಾ ಅಖಾಡದಲ್ಲಿ ಕುರುಡು ಕಾಂಚಾಣದ ಅಬ್ಬರ ಜೋರಾಗಿದೆ. ರಾಜ್ಯ ಚುನಾವಣಾ ಆಯೋಗ ಈವರೆಗೆ ಬರೋಬ್ಬರಿ 265.20 ಕೋಟಿ ರೂ. ಮೌಲ್ಯದ ಅಕ್ರಮ ನಗದು, ಮದ್ಯ, ವಸ್ತುಗಳನ್ನು ಜಪ್ತಿ ಮಾಡಿದೆ.