ಕಳೆದ ಎರಡು ವಾರಗಳಿಂದ ರಿಲೀಸ್ ಆದ ಚಿತ್ರಗಳಿಗೆ ಅಷ್ಟೇನೂ ಒಳ್ಳೆಯ ಪ್ರತಿಕ್ರಿಯೆ ಸಿಗದೇ ಇರುವ ಕಾರಣದಿಂದಾಗಿ ಕಬ್ಜ ಮತ್ತೆ ಚಿತ್ರಮಂದಿರಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದೆ. ಈ ಖುಷಿಯಲ್ಲೇ ಇಂದು ವಿಶೇಷ ಸುದ್ದಿಯೊಂದನ್ನು ನೀಡುವುದಾಗಿ ನಿರ್ದೇಶಕ ಆರ್.ಚಂದ್ರು ಹೇಳಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಆರ್ ಚಂದ್ರು, ‘ನನ್ನ ಕನಸಿನ ಸಿನಿಮಾ ಕಬ್ಜ 25 ದಿನಗಳ ಯಶಸ್ವಿ ಪ್ರದರ್ಶನ ಕಂಡಿದೆ. ಈ ಸಂದರ್ಭದಲ್ಲಿ ದೇಶದ ಸಮಸ್ತ ವೀಕ್ಷಕರಿಗೆ ಅದರಲ್ಲೂ ವಿಶೇಷವಾಗಿ ಕನ್ನಡಿಗರಿಗೆ ಮತ್ತು ನನ್ನ ಚಿತ್ರತಂಡಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಅಭಿಮಾನಿಗಳು ದೊಡ್ಡಮಟ್ಟದಲ್ಲಿ ಸಿನಿಮಾವನ್ನು ಗೆಲ್ಲಿಸಿಕೊಟ್ಟಿದ್ದಾರೆ. ಅವರಿಗಾಗಿ ಇಂದು ವಿಶೇಷ ಸುದ್ದಿಯೊಂದನ್ನು ನೀಡಲಿದ್ದೇನೆ’ ಎಂದಿದ್ದಾರೆ.
ಇಂದು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಿರುವ ಚಂದ್ರು, ಈ ಸಂದರ್ಭದಲ್ಲಿ ಹೊಸ ಯೋಜನೆ ಮತ್ತು ಯೋಚನೆ ಕುರಿತು ಮಾತನಾಡಲಿದ್ದಾರಂತೆ.