ವಾಷಿಂಗ್ಟನ್: ತರಬೇತಿ ಕಾರ್ಯಾಚರಣೆ ನಡೆಸುತ್ತಿದ್ದ ಅಮೆರಿಕ ಸೈನಿಕರ ಬ್ಲಾಕ್ ಹಾಕ್ ಹೆಲಿಕಾಪ್ಟರ್ಗಳು ಪರಸ್ಪರ ಡಿಕ್ಕಿಯಾಗಿ ಪತನಗೊಂಡಿದ್ದು, ಘಟನೆಯಲ್ಲಿ 9 ಸೈನಿಕರು ಮೃತಪಟ್ಟಿದ್ದಾರೆ.
ಪತನಗೊಂಡಿರುವ ಹೆಲಿಕಾಪ್ಟರ್ಗಳು 101 ನೇ ವಾಯುಗಾಮಿ ವಿಭಾಗಕ್ಕೆ ಸೇರಿದ್ದವಾಗಿವೆ. ಬುಧವಾರ ರಾತ್ರಿ 10 ಗಂಟೆ ಸುಮಾರಿಗೆ ತರಬೇತಿ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಫೋರ್ಟ್ ಕ್ಯಾಂಪ್ಬೆಲ್ನ ವಾಯುವ್ಯದಲ್ಲಿರುವ ಕೆಂಟುಕಿಯ ಟ್ರಿಗ್ ಕೌಂಟಿಯಲ್ಲಿ ಅಪಘಾತ ಸಂಭವಿಸಿದೆ ಎಂದು ವಕ್ತಾರ ಲೆಫ್ಟಿನೆಂಟ್ ಕರ್ನಲ್ ಆಂಥೋನಿ ಹೋಫ್ಲರ್ ಮಾಹಿತಿ ನೀಡಿದ್ದಾರೆ.