ಶಿಡ್ಲಘಟ್ಟದಲ್ಲಿ ನಡೆದ ರೋಡ್ ಶೋನಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ(JP Nadda), ಸೀಕಲ್ ರಾಮಚಂದ್ರಗೌಡ ಗೆಲುವಿಗಾಗಿ ರೋಡ್ ಶೋ ಮಾಡುತ್ತಿದ್ದೇವೆ. ಈ ಚುನಾವಣೆ ಕರ್ನಾಟಕದ ಅಭಿವೃದ್ಧಿಗಾಗಿ ನಡೆಯುತ್ತಿರುವ ಚುನಾವಣೆಯಾಗಿದೆ. ಸುಧಾಕರ್, ಸೀಕಲ್ ಅಥವಾ ಕಟೀಲ್ಗಾಗಿ ನಡೆಯುತ್ತಿಲ್ಲ. ಡಬಲ್ ಇಂಜಿನ್ ಸರ್ಕಾರ ಡಬಲ್ ಸ್ಪೀಡ್ನಲ್ಲಿ ಕೆಲಸ ಮಾಡುತ್ತದೆ. ಮತ್ತೊಮ್ಮೆ ಕರ್ನಾಟಕದಲ್ಲಿ ಬಿಜೆಪಿಗೆ(BJP) ಅವಕಾಶ ಮಾಡಿಕೊಡಬೇಕಿದೆ. ಕೇಂದ್ರದಲ್ಲಿ ಮೋದಿ, ರಾಜ್ಯದಲ್ಲಿ ಬೊಮ್ಮಾಯಿ ಅಭಿವೃದ್ಧಿ ಮಾಡುತ್ತಿದ್ದಾರೆ. 2018 ರಲ್ಲಿ ಕೊಟ್ಟಂತಹ ಎಲ್ಲ ಭರವಸೆಯನ್ನು ಬಿಜೆಪಿ ಈಡೇರಿಸಿದೆ.
ಕುಮಾರಸ್ವಾಮಿ ಸರ್ಕಾರ ರೈತರ ಪರ ಯೋಜನೆಗಳಿಗೆ ಮನ್ನಣೆ ನೀಡಿಲ್ಲ. ಕರ್ನಾಟಕದ ಅಭಿವೃದ್ಧಿಗಾಗಿ ಮೋದಿಗಾಗಿ ಮತ ನೀಡಿ. ಕ್ಷೇತ್ರದ ಅಭಿವೃದ್ಧಿಗಾಗಿ ಸೀಕಲ್ಗೆ ಮತ ನೀಡಿ ಎಂದರು. ದೇಶವನ್ನು ಸಂಕಷ್ಟಕ್ಕೆ ಸಿಲುಕಿಸುವ ಪ್ರಯತ್ನ ಪಿಎಫ್ಐ ಮಾಡುತ್ತಿತ್ತು. ಸಿದ್ದರಾಮಯ್ಯ ಸರ್ಕಾರ ಪಿಎಫ್ಐಗೆ ಬೆಂಬಲ ನೀಡುತ್ತಿತ್ತು. ಆದರೆ ಬಿಜೆಪಿ ಸರ್ಕಾರ ಆ ಸಂಘಟನೆಯನ್ನೇ ಬ್ಯಾನ್ ಮಾಡಿದೆ. ಡಿಕೆಶಿವಕುಮಾರ್ ಪಿಎಫ್ಐ ಪರ ಧ್ವನಿ ಎತ್ತುತಿದ್ದಾರೆ. ಮುಸ್ಲಿಂರ ಮೀಸಲಾತಿಯನ್ನು ವಾಪಸ್ ತರುವ ಮಾತನಾಡುತ್ತಿದ್ದಾರೆ ಎಂದರು.