ಕೃಷಿ ಸಚಿವ ಬಿ.ಸಿ ಪಾಟೀಲ್ ಇಂದು ನಾಮ ಪತ್ರ ಸಲ್ಲಿಸುವ ಹಿನ್ನಲೆ ಕುಟುಂಬ ಸಮೇತರಾಗಿ ಅವರ ಮನೆ ದೇವರಾದ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಮುಳಕೊಪ್ಪ ಗ್ರಾಮದ ಶ್ರೀ ಕೋಡಿ ಬಸವೇಶ್ವರ ದೇವರ ದೇವಸ್ಥಾನಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದು ಬಿ.ಫಾರ್ಮ್ ನ್ನೂ ಪೂಜಿಸಿದರು.
ಹಿರೇಕೆರೂರಿನ ತಹಶೀಲ್ದಾರ ಕಛೇರಿಯಲ್ಲಿ ಇಂದು ನಾಮಪತ್ರ ಸಲ್ಲಿಕೆ ಮಾಡುತ್ತಿದ್ದು ಬೃಹತ್ ರೋಡ್ ಶೋ ಮೂಲಕ ಶಕ್ತಿ ಪ್ರದರ್ಶನ ಮಾಡಲಿದ್ದಾರೆ ಈ ವೇಳೆ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಕಲ್ಬುರ್ಗಿ ಸಂಸದರಾದ ಉಮೇಶ ಜಾಧವ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೀಂದ್ರ, ಸಂಸದ ಶಿವಕುಮಾರ ಉದಾಸಿ ಅವರು ಉಪಸ್ಥಿತರಿರುತ್ತಾರೆ.