ಯುವರಾಜ್ ಕುಮಾರ್ ಯುವ ಚಿತ್ರಕ್ಕೂ ಪುನೀತ್ ರಾಜ್ಕುಮಾರ್ ಅವರಿಗೂ ಒಂದು ಲಿಂಕ್ ಇದೆ. ಪೋಸ್ಟರ್ ನಲ್ಲಿ ನೀಡಿದ ಸುಳಿವು ಕಂಡು ಫ್ಯಾನ್ಸ್ ಖುಷ್ ಆಗಿದ್ದಾರೆ.
ದೊಡ್ಮನೆಯ ಮತ್ತೊಂದು ಕುಡಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದು, ರಾಘವೇಂದ್ರ ರಾಜ್ಕುಮಾರ್ ಅವರ ಎರಡನೇ ಪುತ್ರ ಯುವ ರಾಜ್ಕುಮಾರ್ ಚಿತ್ರರಂಗಕ್ಕೆ ಅಧಿಕೃತವಾಗಿ ಕಾಲಿಟ್ಟಿದ್ದಾರೆ. ಯುವ ರಾಜ್ಕುಮಾರ್ ನಟನೆಯ ಮೊದಲ ಸಿನಿಮಾದ ಟೈಟಲ್ ಬಿಡುಗಡೆ ಆಗಿದ್ದು ಚಿತ್ರಕ್ಕೆ ‘ಯುವ’ ಎಂದು ಹೆಸರಿಡಲಾಗಿದೆ. ಪ್ರತಿಷ್ಠಿತ ಹೊಂಬಾಳೆ ಫಿಲ್ಮ್ಸ್ನಲ್ಲಿ ಯುವ ಸಿನಿಮಾ ಮೂಡಿಬರುತ್ತಿದೆ. ಹೊಂಬಾಳೆ ಫಿಲ್ಮ್ಸ್ ಸಿನಿಮಾ ಅನೌನ್ಸ್ ಮಾಡಿ ತಿಂಗಳುಗಳೇ ಕಳೆದಿತ್ತು. ಆದರೆ ಟೈಟಲ್ ಬಹಿರಂಗವಾಗಿರಲಿಲ್ಲ. ಇದೀಗ ಅದ್ದೂರಿಯಾಗಿ ಪೂಜೆ ಸಲ್ಲಿಸುವ ಮೂಲಕ ಸಿನಿಮಾದ ಟೈಟಲ್ ಟೀಸರ್ ರಿಲೀಸ್ ಮಾಡಲಾಗಿದೆ. ಅಶೋಕ್ ಹೋಟೆಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಯುವ ಟೀರಸ್ ರಿಲೀಸ್ ಮಾಡಲಾಯಿತು.
ಟೀಸರ್ ನೋಡಿದ್ರೆ ಇದು ಪಕ್ಕಾ ಮಾಸ್ ಸಿನಿಮಾ ಎನ್ನುವುದು ಗೊತ್ತಾಗುತ್ತಿದೆ. ಭರ್ಜರಿ ಆಕ್ಷನ್ ದೃಶ್ಯಗಳು ಇರಲಿದೆ ಎನ್ನಲಾಗಿದೆ. ಪುಟ್ಟ ಟೀಸರ್ ನಲ್ಲಿಯೇ ಬ್ಯಾಟ್, ಕತ್ತಿ ರಾರಜಿಸಿವೆ. ಟೀಸರ್ ಕೊನೆಯಲ್ಲಿ ‘ನೀನು ದಾಟಿರುವುದು ಬ್ಲಡ್ಲೈನ್, ರಕ್ತ ಹರಿದೇ ಹರಿಯುತ್ತೆ’ ಎಂದು ಯುವ ಖಡಕ್ ಡೈಲಾಗ್ ಹೊಡಿದ್ದಾರೆ. ಈ ಸಿನಿಮಾ ಗ್ಯಾಂಗ್ವಾರ್ಗೆ ಸಂಬಂಧಿಸಿದ ಕತೆ ಹೊಂದಿದೆ ಎನ್ನುವ ಸುಳಿವೂ ಟೈಟಲ್ ಟೀಸರ್ನಲ್ಲಿದೆ.
ವಿಶೇಷ ಎಂದರೆ ಈ ಸಿನಿಮಾಗೂ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೂ ಒಂದು ಲಿಂಕ್ ಇದೆ. ಈ ಸಿನಿಮಾ ಅಪ್ಪು ನೆನಪು ತರಿಸುತ್ತಿದೆ. ಆ ಲಿಂಕ್ ಏನು ಎನ್ನುವುದು ಯುವ ಪೋಸ್ಟರ್ ನಲ್ಲಿ ರಿವೀಲ್ ಆಗಿದೆ. ಹೌದು ಯುವರಾಜ್ ಕುಮಾರ್ ಸಿನಿಮಾದಲ್ಲಿ ಬಳಸುವ ಬೈಕ್ ಅಪ್ಪು ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಆ ಬೈಕ್ ನಲ್ಲಿ ಏನಿದೆ ಅಂತೀರಾ? ಆ ನೋಡ್ತಿದ್ರೆ ಪುನೀತ್ ರಾಜ್ ಕುಮಾರ್ ನೆನಪಾಗುತ್ತಿದ್ದಾರೆ. ಬೈಕ್ ಮೇಲಿರುವ ನಂಬರ್ 144 ಪವರ್ ಸ್ಟಾರ್ ಬಳಿ ಇದ್ದ ದುಬಾರಿ ಲಂಬೋರ್ಘಿನಿ ಕಾರಿನ ನಂಬರ್. ಅಪ್ಪು ಲಂಬೋರ್ಘಿನಿ ಕಾರಿನ ನಂಬರ್ ಅನ್ನೇ ಯುವರಾಜ್ ಕುಮಾರ್ ತಮ್ಮ ಸಿನಿಮಾದಲ್ಲಿ ಬಳಸಿಕೊಂಡಿರುವುದು ವಿಶೇಷವಾಗಿದೆ.
ಪೋಸ್ಟರ್ನಲ್ಲಿರುವ ಈ ರಹಸ್ಯ ಬಹಿರಂಗವಾಗುತ್ತಿದ್ದಂತೆ ಅಭಿಮಾನಿಗಳಲ್ಲಿ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ಅಂದಹಾಗೆ ಯುವ ಸಿನಿಮಾಗೆ ಸಂತೋಷ್ ಆನಂದ್ ರಾಮ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸಂತೋಷ್ ಆನಂದ್ ರಾಮ್ ಅಪ್ಪು ಕಾಂಬಿನೇಷನ್ ನಲ್ಲಿ ಎರಡು ಸಿನಿಮಾ ಮೂಡಿ ಬಂದಿತ್ತು. ರಾಜಕುಮಾರ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತ್ತು. ಅಪ್ಪು ಜೊತೆ ಸಂತೋಷ್ ಆನಂದ್ ರಾಮ್ ವಿಶೇಷವಾದ ಬಾಂಧವ್ಯ ಹೊಂದಿದ್ದರು. ಇದೀಗ ತಮ್ಮ ಮುಂದಿನ ಸಿನಿಮಾದಲ್ಲೂ ಅಪ್ಪು ಅವರಿಗೆ ಲಿಂಕ್ ಕೊಟ್ಟಿರುವುದು ವಿಶೇಷ.
ಅಂದಾಹೆಗ ಯುವ ಸಿನಿಮಾದ ಪೋಸ್ಟರ್, ಟೀಸರ್ ಬಹಿರಂಗ ಪಡಿಸುವ ಜೊತೆಗೆ ಚಿತ್ರದ ರಿಲೀಸ್ ಡೇಟ್ ಕೂಡ ಬಹಿರಂಗವಾಗಿದೆ. ಯುವ ರಾಜ್ಕುಮಾರ್ ಮೊದಲ ಸಿನಿಮಾ ಯುವ, ಇದೇ ವರ್ಷಾಂತ್ಯ ಡಿಸೆಂಬರ್ 22ರಂದ ಬಿಡುಗಡೆ ಆಗುತ್ತಿದೆ. ಭಾರಿ ಕುತೂಹಲ ಮತ್ತು ನಿರೀಕ್ಷೆ ಮೂಡಿಸಿರುವ ಯುವ ಮೊದಲ ಸಿನಿಮಾ ಹೇಗಿರಲಿದೆ ಎಂದು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.