ಭಾರತದ ಚುನಾವಣಾ ಆಯೋಗ (Election Commission of India) ಇದೇ ಮೊದಲ ಬಾರಿಗೆ 80 ವರ್ಷ ಮೇಲ್ಪಟ್ಟ ಹಿರಿಯರಿಗೆ ಮತ್ತು ವಿಶೇಷಚೇತನರಿಗೆ (Disabilities) ಮನೆಯಿಂದಲೇ ಮತದಾನ (Vote From Home) ಮಾಡಲು ಅವಕಾಶ ನೀಡಿದೆ. ಈ ಸಂಬಂಧ ಚುನಾವಣಾ ಆಯೋಗ ಈಗಾಗಲೆ ತಯಾರಿ ಮಾಡಿಕೊಂಡಿದೆ. ಇದರಂತೆ ರಾಜ್ಯಾದ್ಯಂತ 80 ವರ್ಷಕ್ಕಿಂತ ಮೇಲ್ಪಟ್ಟ 60,000 ಜನರು ಮತ್ತು 15,000-20,000 ಜನ ವಿಶೇಷಚೇತನರು ಮನೆಯಿಂದ ಮತ ಚಲಾಯಿಸುವ ಆಯ್ಕೆಯನ್ನು ಆರಿಸಿಕೊಂಡಿದ್ದಾರೆ.
ಮನೆಯಿಂದಲೇ ಮತದಾನ ಮಾಡಲು ಮತದಾರರು ಸಲ್ಲಿದ ಅರ್ಜಿಗಳನ್ನು ಚುನಾವಣಾಧಿಕಾರಿಗಳು ಪರಿಶೀಲಿ ನಂತರ ಮತದಾನಕ್ಕೆ ಬೇಕಾದ ಸೌಲಭ್ಯವನ್ನು ಒದಗಿಸುವ ಬಗ್ಗೆ ನಿರ್ಧರಿಸುತ್ತಾರೆ. ಪಟ್ಟಿಯನ್ನು ಮುಂಚಿತವಾಗಿ ಪಕ್ಷಗಳೊಂದಿಗೆ ಹಂಚಿಕೊಳ್ಳಲಾಗುತ್ತದೆ” ಎಂದು ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಹೇಳಿದ್ದಾರೆ .