ಹಾಸನ ವಿಧಾನಸಭಾ ಕ್ಷೇತ್ರದ (Hassan Assembly Constituency) ಜೆಡಿಎಸ್ (JDS) ಟಿಕೆಟ್ ಕೊನೆಗೂ ಸ್ವರೂಪ್ಗೆ (Swaroop Gowda)ಸಿಕ್ಕಿದೆ. ಜೆಡಿಎಸ್ ಎರಡನೇ ಪಟ್ಟಿ ಬಿಡುಗಡೆಯಾಗಿದ್ದು ಭವಾನಿ ರೇವಣ್ಣಗೆ ಟಿಕೆಟ್ ತಪ್ಪಿದೆ.
ಸ್ವರೂಪ್ ಮತ್ತು ಭವಾನಿ ರೇವಣ್ಣ (Bhavani Revanna) ಮಧ್ಯೆ ಟಿಕೆಟ್ಗಾಗಿ ಭಾರೀ ಸ್ಪರ್ಧೆ ನಡೆದಿತ್ತು. ಭವಾನಿ ರೇವಣ್ಣ ಈ ಬಾರಿ ನಾನೇ ಹಾಸನದಿಂದ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದ್ದರು.
ಇತ್ತ ಇನ್ನೊಂದು ಕಡೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಸ್ವರೂಪ್ ಪರ ಬ್ಯಾಟ್ ಬೀಸಿದ್ದರು. ಎಚ್ಡಿ ರೇವಣ್ಣ ಪತ್ನಿಯ ಪರವಾಗಿ ಮಾತನಾಡಿದ್ದರು.
ಕಳೆದ ಎರಡು ತಿಂಗಳಿನಿಂದ ಭವಾನಿ ವರ್ಸಸ್ ಸ್ವರೂಪ್ ಮಧ್ಯೆ ಭಾರೀ ಪೈಪೋಟಿ ನಡೆದಿತ್ತು. ಎಚ್ಡಿ ರೇವಣ್ಣ ಅವರು ಹಾಸನ ಟಿಕೆಟ್ ಯಾರಿಗೆ ಸಿಗಬೇಕು ಎನ್ನುವುದರ ಬಗ್ಗೆ ದೇವೇಗೌಡರು ನಿರ್ಧಾರ ಮಾಡುತ್ತಾರೆ ಎಂದು ಹೇಳಿದ್ದರು. ಆದರೆ ಅಂತಿಮವಾಗಿ ಹಾಸನ ಟಿಕೆಟ್ ಅನ್ನು ಸ್ವರೂಪ್ ಪಡೆದುಕೊಂಡಿದ್ದು ಭವಾನಿ ರೇವಣ್ಣಗೆ ಭಾರೀ ಹಿನ್ನಡೆಯಾಗಿದೆ.