ಧಾರವಾಡ ಜಿಲ್ಲೆಯ ಕುಂದಗೋಳ ಕ್ಷೇತ್ರದ ಬಿಜೆಪಿ ಅಬ್ಯರ್ಥಿಯನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಿ ಕಳಿಸಿ,ಇಲ್ಲಿ ಹದಗೆಟ್ಟಿರುವ ರಸ್ತೆ ಸರಿಪಡಿಸುತ್ತಾರೆ ಎಂದು ಚಿತ್ರ ನಟ ಸುದೀಪ್, ಗೆದ್ದ ಮೇಲೂ ಅವರಿಂದ ಸಾದ್ಯ ಆಗದಿದ್ದರೆ ಆ ಕೆಲಸ ಮಾಡಿಸಿಕೊಡಲು ನನ್ನನ್ನು ಕೇಳಿ ಎಂದರು.
ತಾಲೂಕಿನ ಸಂಶಿ ಗ್ರಾಮದ ನಾಡರ ಬಯಲಿನಲ್ಲಿ ಜರುಗಿದ. ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು,
ನಿಮ್ಮೂರಲ್ಲಿನ ಪರಸ್ಥಿತಿ ಹದಗೆಟ್ಟು ಹೋಗಿದೆ. ಆದರೂ ನೀವು ಸುಮ್ಮನಿದ್ದೀರಿ ಎಂದುಕೊಂಡಿಲ್ಲ. ಏಕೆಂದರೆ ನೀವೆಲ್ಲಾ ಬಿಜೆಪಿ ಅಬ್ಯರ್ಥಿ ಎಂ.ಆರ್.ಪಾಟೀಲ್ ಅವರನ್ನು ಖಂಡಿತ ಗೆಲ್ಲಿಸುತ್ತೀರಿ ಎಂಬ ವಿಶ್ವಾಸ ನನಗೀಗ ಮೂಡಿದೆ. ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕು.ಎಂ.ಆರ್.ಪಾಟೀಲ ಕುಂದಗೋಳ ಶಾಸಕರಾಗಬೇಕು.ಅದಕ್ಕಾಗಿ ನೀವೆಲ್ರೂ ಓಟ್ ಹಾಕಬೇಕು.ಹಾಕಿಸಬೇಕು ಎಂದು ತಮ್ಮದೇ ಸಿನಿಮಾ ಧಾಟಿಯಲ್ಲಿ ಕರೆ ನೀಡಿದರು. ಕುಂದಗೋಳ ಪಟ್ಟಣದಲ್ಲಿ ಹೆಲಿಕ್ಯಾಪ್ಟರ್ ನಲ್ಲಿ ಬಂದಿಳಿದು ರಸ್ತೆ ಮೂಲಕ ಸಂಶಿ ತಲುಪಿ,ಬಸ್ ನಿಲ್ದಾಣದ ಮೂಲಕ ಮೆರವಣಿಗೆಯಲ್ಲಿ ಸಾಗಿ ನಂತರ ಬಹಿರಂಗ ಸಭೆಯಲ್ಲಿ ಪಾಲ್ಗೊಂಡರು.