ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ಪಟ್ಟಣದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಬೃಹತ್ ರೋಡ್ ಶೋ ನಡೆಸಿದರು.. ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ನಗರದ ವಾಲ್ಮೀಕಿ ವೃತ್ತದಿಂದ ಬಿ ಹೆಚ್ ರಸ್ತೆಯಲ್ಲಿ ಸಂಚರಿಸಿ ಬೈಪಾಸ್ ರಸ್ತೆ ವರೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಬೃಹತ್ ರೋಡ್ ಶೋ ನಡೆಸಿದರು.
ರೋಡ್ ಶೋ ನಲ್ಲಿ ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಎನ್ ಹೆಚ್ ಶಿವಶಂಕರ ರೆಡ್ಡಿ . ಚಿಂತಾಮಣಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಡಾ. ಎಂ ಸಿ ಸುಧಾಕರ್ . ಹಿರಿಯ ಕಾಂಗ್ರೆಸ್ ನಾಯಕ ನಜೀರ್ ಅಹ್ಮದ್ ಬಾಗಿಯಾಗಿದ್ದರು. ರೋಡ್ ಶೋ ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬಾಗಿಯಾಗಿದ್ದರು.