ಜಿಯೋಸಿನಿಮಾ (JioCinema) ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾರನ್ನು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023ರ ನಡೆಯುತ್ತಿರುವ ಆವೃತ್ತಿಗೆ ತನ್ನ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿಕೊಂಡಿದೆ. ನವದೆಹಲಿ: ಜಿಯೋಸಿನಿಮಾ (JioCinema) ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾರನ್ನು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023ರ ನಡೆಯುತ್ತಿರುವ ಆವೃತ್ತಿಗೆ ತನ್ನ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿಕೊಂಡಿದೆ.
ಸ್ಟಾರ್ ಕ್ರಿಕೆಟಿಗ ಮತ್ತು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಜಿಯೋಸಿನಿಮಾದ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆಯಾಗಿದ್ದಾರೆ. ನಾವು ನಮ್ಮ ಕೊಡುಗೆಗಳನ್ನು ಮುಂದುವರಿಸುತ್ತೇವೆ. ಡಿಜಿಟಲ್ ಸ್ಟ್ರೀಮಿಂಗ್ ನಮ್ಮ ಲಕ್ಷಾಂತರ ವೀಕ್ಷಕರಿಗೆ ನವೀನ ಮತ್ತು ಅನನ್ಯ ಅನುಭವವನ್ನು ನೀಡುತ್ತದೆ ಎಂದು ಭಾವಿಸುತ್ತೇವೆ’ ಎಂದು ಜಿಯೋಸಿನಿಮಾದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜಿಯೋಸಿನಿಮಾ ಶೀಘ್ರದಲ್ಲೇ ರೋಹಿತ್ ಶರ್ಮಾ ಅವರನ್ನೊಳಗೊಂಡ ಪ್ರೋಮೋಗಳು ಮತ್ತು ಜಾಹೀರಾತು ಪ್ರಚಾರಗಳೊಂದಿಗೆ ಹೊರಬರಲಿದೆ.