ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ನಾಲ್ಕನೇ ಪಂದ್ಯ ಆಡಲಿದ್ದು, ಹೆಚ್ಚೆಚ್ಚು ಅಭಿಮಾನಿಗಳು ಕಿಕ್ಕಿರಿದು ಸೇರಲಿದ್ದಾರೆ. ಈ ಹಿನ್ನೆಲೆ ಸಂಚಾರ ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ಕ್ರೀಡಾಂಗಣ ಸುತ್ತಮುತ್ತ ವಾಹನಗಳ ನಿಲುಗಡೆ ನಿರ್ಬಂಧಿಸಲಾಗಿದೆ. ವಿಠಲ್ ಮಲ್ಯ ರೋಡ್, ಎಂಜಿ ರೋಡ್, ಕ್ವೀನ್ಸ್ ರೋಡ್, ಎಂಜಿ ರೋಡ್ನಿಂದ ಕಬ್ಬನ್ ರೋಡ್, ಸೆಂಟ್ ಮಾರ್ಕ್ಸ್ ರೋಡ್, ಮ್ಯೂಸಿಯಂ ರೋಡ್, ಕಸ್ತುರ ಬಾ ರಸ್ತೆ, ರಾಜಭವನ ರಸ್ತೆ, ಕಬ್ಬನ್ ರೋಡ್, ಅಂಬೇಡ್ಕರ್ ವೀದಿ ರಸ್ತೆ, ಟ್ರಿನಿಟಿ ಸರ್ಕಲ್, ಲ್ಯಾವೆಲ್ಲೆ ರೋಡ್, ಸೆಂಟ್ರಲ್ ಸ್ಟ್ರೀಟ್ ರೋಡ್, ನೃಪತುಂಗ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ನಗರ ಸಂಚಾರಿ ಪೊಲೀಸರು ಮಾಹಿತಿ ನೀಡಿದ್ದಾರೆ. ಕಿಂಗ್ಸ್ ರಸ್ತೆ, ಶಿವಾಜಿನಗರ ಬಿಎಂಟಿಸಿ ಬಸ್ ನಿಲ್ದಾಣದ ಮೊದಲ ಮಹಡಿ, ಹಳೆ ಕೆಜಿಐಡಿ ಕಟ್ಟಡ, ಬಿಆರ್ವಿ ಮೈದಾನ, ಕಂಠೀರವ ಕ್ರೀಡಾಂಗಣ, ಯು.ಬಿಸಿಟಿ ಹಾಗೂ ಶಾಂತಿನಗರ ಬಿಎಂಟಿಸಿ ಬಸ್ ನಿಲ್ದಾಣದ ಪಾರ್ಕಿಂಗ್ ಜಾಗದಲ್ಲಿ ಸಾರ್ವಜನಿಕರು ವಾಹನ ನಿಲ್ಲಿಸಬಹುದು ಎಂದು ಹೇಳಿದ್ದಾರೆ.