ಅಕ್ರಮವಾಗಿ ನಿರ್ಮಿಸಲಾಗುತ್ತಿದ್ದ ದರ್ಗಾದ ಬಗ್ಗೆ ಟ್ವೀಟ್ ಒಂದನ್ನು ಮಹಾರಾಷ್ಟ್ರದ ನವನಿರ್ಮಾಣ ಸೇನೆ ನಾಯಕ ರಾಜ್ ಠಾಕ್ರೆ ಹಂಚಿಕೊಂಡ ಬಳಿಕ ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಗುರುವಾರ ಮಾಹಿಮ್ ಕರಾವಳಿ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿದ್ದ ದರ್ಗಾವನ್ನು ಕೆಡವಿದೆ.
ರಾಜ್ ಠಾಕ್ರೆ ಅವರು ಮಾಹಿಮ್ ಕರಾವಳಿ ಪ್ರದೇಶದಲ್ಲಿ ಅನಧಿಕೃತವಾಗಿ ದರ್ಗಾವನ್ನು ನಿರ್ಮಿಸಲಾಗುತ್ತಿದೆ ಎಂದು ಆರೋಪಿಸಿ ಡ್ರೋನ್ ಕ್ಯಾಮೆರಾದಲ್ಲಿ ತೆಗೆಯಲಾಗಿದ್ದ ದೃಶ್ಯಗಳನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದರು. ಠಾಕ್ರೆ ಟ್ವೀಟ್ ಮಾಡಿದ ಕೇವಲ 1 ದಿನದ ಬಳಿಕ ಮುಂಬೈ ನಾಗರಿಕ ಮಂಡಳಿ ಅಕ್ರಮ ದರ್ಗಾವನ್ನು ನೆಲಸಮಗೊಳಿಸುವ ಕಾರ್ಯಾಚರಣೆಗೆ ಇಳಿದಿದೆ.