ಸಾಧಾರಣ ಮಳೆಯಾಗುವ ಜಿಲ್ಲೆಗಳು
ಉಡುಪಿ ಜಿಲ್ಲೆ, ಉತ್ತರ ಕನ್ನಡ ಜಿಲ್ಲೆ, ತುಮಕೂರಿನ ಮಧ್ಯ ಹಾಗೂ ಪೂರ್ವ ಭಾಗದ ತಾಲೂಕುಗಳು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರದ ಮಧ್ಯಭಾಗ, ಕೊಪ್ಪಳದ ಪೂರ್ವ ಭಾಗ, ರಾಯಚೂರಿನ ದಕ್ಷಿಣ ಭಾಗದ ತಾಲೂಕುಗಳಲ್ಲಿ ಬೀದರ್ ನಲ್ಲಿ ಸಾಧಾರಣ, ಅಂದರೆ, 5 ಮಿ.ಮೀ.ನಿಂದ ಗರಿಷ್ಠ 16 ಮಿ.ಮೀ.ನಷ್ಟು ಮಳೆ ಬೀಳಲಿದೆ ಎಂದು ಕೆ.ಎಸ್.ಎಂ.ಡಿ.ಎಂ.ಸಿ ಪ್ರಕಟಿಸಿರುವ ಮ್ಯಾಪ್
ಭಾರೀ ಮಳೆಯಾಗುವ ಜಿಲ್ಲೆಗಳು
ಕಲಬುರಗಿ, ಗೋಕಾಕ್, ಕಿತ್ತೂರು, ದಕ್ಷಿಣ ಕನ್ನಡದ ಪೂರ್ವ ಭಾಗದ ಪ್ರಾಂತ್ಯಗಳು, ರಾಮನಗರ, ಕುಣಿಗಲ್, ತುಮಕೂರು ಜಿಲ್ಲೆಯ ಪಶ್ಚಿಮ ಭಾಗದ ಪ್ರದೇಶಗಳಾದ ಗುಬ್ಬಿ, ಚಿಕ್ಕನಾಯಕನ ಹಳ್ಳಿ, ಕುಣಿಗಲ್, ಚಿತ್ರದುರ್ಗದ ಹೊಸದುರ್ಗ, ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮುರು; ಬಳ್ಳಾರಿಯ ಕೂಡ್ಲಿಗಿ, ಸಂಡೂರು; ಕೊಪ್ಪಳ ಜಿಲ್ಲೆಯ ಕೊಪ್ಪಳ, ಕುಕನೂರು, ಯಲಬುರ್ಗಾ, ಗಜೇಂದ್ರಗಡ, ಕುಷ್ಟಗಿ; ಬಾಗಲಕೋಟೆಯ ಗುಳೇದ ಗುಡ್ಡ, ಹುನಗುಂದ; ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ, ಬಾಗೇವಾಡಿ, ತಾಳಿಕೋಟೆ, ದೇವರ ಹಿಪ್ಪರಗಿ, ಸಿಂದಗಿ, ಇಂಡಿ, ಚಡಚಣ; ಕಲಬುರಗಿ ಜಿಲ್ಲೆಯ ಚಿತ್ತಾಪುರ, ಜೇವರ್ಗಿ, ಅಫ್ಜಜಲ್ಪುರ, ಕಮಲಾಪುರ, ಸೇಡಂ, ಚಿಂಚೋಳಿ ಹಾಗೂ ಸುತ್ತಲಿನ ಪ್ರಾಂತ್ಯಗಳಲ್ಲಿ ಹೆಚ್ಚು ಮಳೆಯಾಗಲಿದೆ ಎಂದು ಪ್ರಕಟಣೆಯಲ್ಲಿ ಗುರುತಿಸಲಾಗಿದೆ.
ಭಾರಿಯಿಂದ ಅತಿಭಾರಿಯಾಗಿ ಮಳೆಯಾಗುವ ಜಿಲ್ಲೆಗಳು
ಕೆ.ಎಸ್.ಎಂ.ಡಿ.ಎಂ.ಸಿ. ಪ್ರಕಟಿಸಿರುವ ಕರ್ನಾಟಕದ ಹವಾಮಾನ ಭೂಪಟದ ಪ್ರಕಾರ, ಬಾಗಲಕೋಟೆ, ಬೆಳಗಾವಿ, ಯಾದಗಿರಿ, ಧಾರವಾಡ, ಗದಗ, ವಿಜಯನಗರ, ಹಾವೇರಿ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು ಹಾಗೂ ಚಾಮರಾಜ ನಗರ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.
ಅತ್ಯಲ್ಪ ಮಳೆಯಾಗುವ ಪ್ರದೇಶಗಳು: ತುಮಕೂರಿನ ಪೂರ್ವ ಭಾಗ, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರದ ಪೂರ್ವ ಭಾಗ, ಬಳ್ಳಾರಿಯ ಪೂರ್ವ ಭಾಗ, ರಾಯಚೂರು, ಬೀದರ್ ನ ಕೆಲವು ಪ್ರಾಂತ್ಯಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಕೆ.ಎಸ್.ಎಂ.ಡಿ.ಎಂ.ಸಿ ಪ್ರಕಟಿಸಿರುವ ಭೂಪಟದಲ್ಲಿ ಗುರುತಿಸಲಾಗಿದೆ.