ರಾಜ್ಯ ಬಿಜೆಪಿ ನಾಯಕರಿಗೆ 40 ನಂಬರ್ ಚೆನ್ನಾಗಿ ಒಪ್ಪುತ್ತದೆ, ಬಿಜೆಪಿಗೆ 40 ಸ್ಥಾನ ಮಾತ್ರ ನೀಡಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul gandhi) ಹೇಳಿದ್ದಾರೆ. ಬಳ್ಳಾರಿ ಕಾಂಗ್ರೆಸ್(Congress) ಸಮಾವೇಶದಲ್ಲಿ ಮಾತನಾಡಿದ ಅವರು, ಯಾರು ಗೆಲ್ಲಬೇಕು ಅಂತಾ ನೀವು ನಿರ್ಣಯ ತೆಗೆದುಕೊಳ್ಳಬೇಕು. ನೀವು ಗೆಲ್ಲಿಸಿದ ಶಾಸಕರನ್ನು ಕಿತ್ತುಕೊಂಡು ಸರ್ಕಾರ ಮಾಡಿದ್ದಾರೆ.