ಅಥಣಿಯ ಲಕ್ಷ್ಮಣ ಸವದಿ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರ್ಪಡೆಗೊಂಡಿರುವ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ ಗಟ್ಟಿಯಾಗಿರುವ ಲಿಂಗಾಯತ ಮತಗಳು ಹರಿದು ಹಂಚಿಹೋಗುವ ಸಾಧ್ಯತೆಗಳಿವೆ.
ಇದನ್ನು ತಡೆಯಲು ಬಿಜೆಪಿ ನಾನಾ ಸರ್ಕಸ್ ಗಳನ್ನು ಶುರು ಮಾಡಿದೆ. ಇದಕ್ಕೆ ಕೌಂಟರ್ ಕೊಡಲು, ಕಾಂಗ್ರೆಸ್ ಕೂಡ ಸಿದ್ಧತೆಗಳನ್ನು ನಡೆಸಿದ್ದು ಇದೇ 25ರಂದು ಲಿಂಗಾಯತರ ಪರಮಪವಿತ್ರ ಧಾಮವಾದ, ಬಸವಣ್ಣನವರ ಲಿಂಗೈಕ್ಯ ಸ್ಥಳವಾದ ಕೂಡಲ ಸಂಗಮಕ್ಕೆ ರಾಹುಲ್ ಗಾಂಧಿಯವರನ್ನು ಕರೆಯಿಸುವ ಲೆಕ್ಕಾಚಾರ ಹಾಕಿಕೊಂಡಿದೆ.