ಕೆಲ ತಿಂಗಳ ಹಿಂದೆ ಪತಿ ನರೇಶ್ ಹಾಗೂ ಪವಿತ್ರಾ ಲೋಕೇಶ್ ಅವರನ್ನು ರಮ್ಯಾ ಮೈಸೂರು ಲಾಡ್ಜ್ ನಲ್ಲಿ ರೆಡ್ ಹ್ಯಾಂಡ್ ಆಗಿ ಹಿಡಿದು ಬಿಟ್ಟಿದ್ದರು. ಆ ದೃಶ್ಯವನ್ನೂ ಸಿನಿಮಾದಲ್ಲಿ ಅಳವಡಿಸಿಕೊಳ್ಳಲಾಗಿದ್ದು, ಅಂದು ರಮ್ಯಾ ಮಾಧ್ಯಮಗಳ ಮುಂದೆ ಮಾಡಿದ ಎಲ್ಲಾ ಆರೋಪಗಳನ್ನು ಸಿನಿಮಾದಲ್ಲಿ ಬಳಸಿಕೊಳ್ಳಲಾಗಿದೆ ಎಂಬ ಮಾತು ಕೇಳಿ ಬರುತ್ತಿದೆ. ಅಲ್ಲದೆ ಅದರ ಝಲಕ್ ಅನ್ನು ಟೀಸರ್ ನಲ್ಲೂ ತೋರಿಸಲಾಗಿದೆ. ಈ ಮೂಲಕ ಅನೇಕ ವಿಷಯಗಳಲ್ಲಿ ಪತ್ನಿ ರಮ್ಯಾಗೆ ನರೇಶ್ ಟಾಂಗ್ ನೀಡಿದ್ದಾರೆ. ರಾಜು ನಿರ್ದೇಶನದ ಮತ್ತೆ ಮದುವೆ ಸಿನಿಮಾಗೆ ನರೇಶ್ ಹಾಗೂ ಪವಿತ್ರಾ ಲೋಕೇಶ್ ಲವ್ ಸ್ಟೋರಿಯನ್ನೇ ಕಥೆಯನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಅವರವರ ಪಾತ್ರಗಳನ್ನು ಅವರೇ ಮಾಡಿದ್ದು ಈ ಸಿನಿಮಾಗೆ ನರೇಶ್ ಬಂಡವಾಳ ಹೂಡಿದ್ದಾರೆ ಎಂದು ಹೇಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತೆ ಮದುವೆ ಸಿನಿಮಾ ಯಾವ ರೀತಿಯ ತಿರುವು ಪಡೆದುಕೊಳ್ಳುತ್ತೆ ಕಾದು ನೋಡಬೇಕಿದೆ.
