ಮಧ್ಯಪ್ರದೇಶದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. 22 ವರ್ಷದ ಹುಡುಗಿಯೊಬ್ಬಳನ್ನು ಭಗ್ನಪ್ರೇಮಿಯೋರ್ವ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಆರೋಪಿ 2 ವರ್ಷಗಳಿಂದ ಆತನನ್ನು ಹಿಂಬಾಲಿಸುತ್ತಲೇ ಇದ್ದು, ಈಗ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಅಲ್ಲದೇ ಆತನನ್ನು ಬಂಧಿಸಲು ಹೊದ ಪೊಲೀಸರ ಮೇಲೆಯೂ ಆರೋಪಿ ಗುಂಡು ಹಾರಿಸಿದ್ದು ಈ ವೇಳೆ ಆತನ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ.
ದೀಪಕ್ ರಾಥೋರೆ ಎಂಬಾತನೇ ಹೀಗೆ ಯುವತಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ ಯುವಕ. ಪೂಜಾ ಹತ್ಯೆಯಾದ ಯುವತಿಯಾಗಿದ್ದು, ಎಂದಿನಂತೆ ಕೆಲಸಕ್ಕೆ ಹೋಗುತ್ತಿದ್ದ ವೇಳೆ ಆರೋಪಿ ದೀಪಕ್ ನಡುರಸ್ತೆಯಲ್ಲೇ ಪೂಜಾ ಮೇಲೆ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಮಧ್ಯಪ್ರದೇಶದ (Madhya Pradesh) ಧಾರ್ ನಗರದಲ್ಲಿ ಈ ಘಟನೆ ನಡೆದಿದೆ.