ಮನುಷ್ಯನ ಒಂದು ಕ್ಷಣದ ಕೋಪ ಎಂತಹ ಪರಿಸ್ತಿತಿಗೆ ತೆಗೆದುಕೊಂಡು ಹೋಗುತ್ತೆ ಅನ್ನೋದಕ್ಕೆ ಬೆಂಗಳೂರಿ ನಲ್ಲಿ ನಡೆದ ಈ ಘಟನೆ ಸಾಕ್ಷಿ. ಹೀಗೆ ನಾಯಿ ಹಿಡ್ಕೋಂಡು ಪೋಸು ಕೊಟ್ಟಿರುವ ವ್ಯಕ್ತಿಯ ಹೆಸರು ಪ್ರಮೋದ್.. ಬೆಂಗಳೂರಿನ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿ ಯಲ್ಲಿ ಇರುವ ಗಾಣಿಗರಹಳ್ಳಿ ನಿವಾಸಿ.. ಈ ಪ್ರಮೋದ್ ತನ್ನ ನಾಯಿ ಭಗ್ಗೆ ಮಾತನಾಡಿದ ಅಂತ ವೃದ್ದನೊಬ್ಬನ ಕೊಲೆ ಮಾಡಿದ್ದಾನೆ.. ಇವನಿಂದ ಕೊಲೆಯಾದ ವೃದ್ದನ ಹೆಸರು ಮುನಿರಾಜು..
ಮುನಿರಾಜು ಕುಟುಂಬ ಗಾಣಿಗರಹಳ್ಳಿಯಲ್ಲಿ ವಾಸ ಮಾಡ್ತಿದೆ.. ಈ ಪ್ರಮೋದ್ ತಾನು ಸಾಕಿದ್ದ ನಾಯಿಯನ್ನು ಮುನಿರಾಜು ಮನೆ ಹತ್ತಿರ ವಾಕಿಂಗ್ ಗೆ ಕರೆದುಕೊಂಡು ಹೋಗಿದಾನೆ .. ಈ ವೇಳೆ ನಾಯಿ ಮುನಿರಾಜು ಮನೆ ಹತ್ತಿರ ಗಲೀಜು ಮಾಡಿದೆ.. ಜೊತೆಗೆ ಪ್ರಮೋದ್ ಸಿಗರೇಟ್ ಸೇದಿ ಮುನಿರಾಜು ಮುಂದೆ ಎಸೆಯುತ್ತಿದ್ದ.. ಇಷ್ಟೇ ನೋಡಿ ಆಗಿದ್ದು , ಇದೇ ವಿಚಾರಕ್ಕೆ ಮುನಿರಾಜು ಹಾಗು ಪ್ರಮೋದ್ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.. ಪೊಲೀಸರು ಇಬ್ಬರಿಗು ಬುದ್ದಿವಾದ ಕಳಿಸಿದ್ದಾರೆ.. ಇಷ್ಟಕ್ಕೆ ಸುಮ್ಮನೆ ಆಗಿದ್ರೆ ಎಲ್ಲಾವು ಮುಗಿದುಹೋಗ್ತಾ ಇತ್ತು.. ಆದರೆ ಈ ಪ್ರಮೋದ್ ತನ್ನ ವಿರುದ್ಧ ಪೊಲೀಸರಿಗೆ ದೂರು ಕೊಟ್ಟ ಅನ್ನೋ ಕಾರಣಕ್ಕೆ ಸ್ನೇಹಿತ ರವಿಕುಮಾರ್ ಜೊತೆ ಸೇರಿಕೊಂಡು ಮುನಿರಾಜು ಮನೆ ಹತ್ತಿರ ಬಂದು ಗಂಭೀರವಾಗಿ ಮುನಿರಾಜುಗೆ ದೊಣ್ಣೆಯಿಂದ ಹೊಡೆದುಬಿಟ್ಟಿದ್ದಾನೆ..
ಗಾಯಗೊಂಡ ಮುನಿರಾಜು ನನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡ್ತಾರೆ.. ಚಿಕಿತ್ಸೆ ಫಲಕಾರಿಯಾಗದೇ ಮುನಿರಾಜು ಸಾವನ್ನಪ್ಪಿದಾನೆ ..ಪ್ರಕರಣ ದಾಖಲಿಸಿಕೊಂಡ ಸೋಲದೇವನಹಳ್ಳಿ ಪೊಲೀಸರು ಪ್ರಮೋದ್ , ರವಿಕುಮಾರ್ ಹಾಗೂ ಪ್ರಮೋದ್ ಪತ್ನಿ ಪಲ್ಲವಿಯನ್ನು ಅರೆಸ್ಟ್ ಮಾಡಿದ್ದಾರೆ..
ಮಾತಿನಲ್ಲಿ ಮುಗಿಯಬೇಕಿದ ಗಲಾಟೆ ಕೊಲೆ ಯಲ್ಲಿ ಅಂತ್ಯ ಕಂಡಿದ್ದು ಮಾತ್ರ ದುರಂತ..