ಶ್ರೀಕಾಂತ್ ಒಡೆಲಾ ಆಕ್ಷನ್ ಕಟ್ ಹೇಳಿರುವ ದಸಾರ ಸಿನಿಮಾಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದು ನಾನಿ ನಟನೆಯ ಮೊದಲ ಪ್ಯಾನ್ ಇಂಡಿಯಾ ಸಿನಿಮಾಗಿದ್ದು ಬಾಕ್ಸ್ ಆಫೀಸ್ ನಲ್ಲಿ ಇನ್ನಿಲ್ಲದಂತೆ ಕಲೆಕ್ಷನ್ ಮಾಡುತ್ತಿದೆ. ಕಲ್ಲಿದ್ದಲು ಗಣಿಯ ಸುತ್ತ ನಡೆಯುವ ಗ್ರಾಮೀಣ ಸೊಗಡಿನ ಕತೆಯಲ್ಲಿ ರಾಷ್ಟ್ರಪ್ರಶಸ್ತಿ ವಿಜೇತೆ ಕೀರ್ತಿ ಸುರೇಶ್ ನಾಯಕಿಯಾಗಿ ನಟಿಸಿದ್ದು, ವಿಶ್ವಾದ್ಯಂತ ಅದ್ಭುತ ಪ್ರದರ್ಶನ ಕಾಣ್ತಿರುವ ದಸರಾ ಚಿತ್ರವನ್ನು ಎಸ್ ಎಸ್ ರಾಜಮೌಳಿ, ಮಹೇಶ್ ಬಾಬು ಹಾಗೂ ಪ್ರಭಾಸ್ ಮೆಚ್ಚಿಕೊಂಡಿದ್ದಾರೆ
ಎಸ್ ಎಲ್ ವಿ ಕ್ರಿಯೇಷನ್ ನಡಿ ಸುಧಾಕರ್ ಚೆರುಕೂರಿ ಅದ್ಧೂರಿಯಾಗಿ ದಸರಾ ಸಿನಿಮಾ ನಿರ್ಮಿಸಿದ್ದರು. ಸಿನಿಮಾ ಅಭೂತ ಪೂರ್ವ ಯಶಸ್ಸು ಘಳಿಸುತ್ತಿರುವ ಹಿನ್ನೆಲೆಯಲ್ಲಿ ನಿರ್ಮಾಪಕರು ಹೈದ್ರಾಬಾದ್ ಕರಿಮಾನಗರದಲ್ಲಿ ಸಕ್ಸಸ್ ಕಾರ್ಯಕ್ರಮ ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ನಿರ್ದೇಶಕ ಶ್ರೀಕಾಂತ್ ಒಡೆಲಾಗೆ ದುಬಾರಿ ಮೊತ್ತದ ಬಿಎಂಡಬ್ಲ್ಯೂ ಕಾರು ಗಿಫ್ಟ್ ನೀಡಿದ್ದು, ದಸರಾಗೆ ಕೆಲಸ ಮಾಡಿದ ಇಡೀ ತಂಡಕ್ಕೆ ತಲಾ 10 ಗ್ರಾಂ ಚಿನ್ನದ ನಾಣ್ಯವನ್ನು ನೀಡಿದ್ದಾರೆ.