ಬೆಂಗಳೂರು ನಾಗರಿಕರೇ ಗಮನಿಸಿ, ಬಿಬಿಎಂಪಿ ಮಾಂಸ ಮಾರಾಟದ ಕುರಿತು ಮಹತ್ವದ ಆದೇಶ ಹೊರಡಿಸಿದೆ. ಪ್ರಾಣಿವಧೆ ಮತ್ತು ಮಾಂಸ ಮಾರಾಟದ ಬಗ್ಗೆ ಬೆಂಗಳೂರಿನ ನಾಗರಿಕರು ತಿಳಿದುಕೊಂಡಿರಲೇಬೇಕಾದ ಮಾಹಿತಿ ಇಲ್ಲಿದೆ. ಏಪ್ರಿಲ್ 4ರಂದು ಅಂದರೆ ಇಂದು ಮಹಾವೀರ ಜಯಂತಿಯ ನಿಮಿತ್ತ ಪ್ರಾಣಿವಧೆ ಮತ್ತು ಮಾಂಸ ಮಾರಾಟ ನಿಷೇಧಿಸಿ ಬಿಬಿಎಂಪಿ ಆದೇಶ ಹೊರಡಿಸಿದೆ. ಹೀಗಾಗಿ ಬೆಂಗಳೂರಿನಲ್ಲಿ ಮಂಗಳವಾದ ಮಾಂಸ ಮಾರಾಟ ಅಥವಾ ಖರೀದಿ ಮಾಡಲು ಸಾಧ್ಯವಾಗುವುದಿಲ್ಲ. ಶ್ರೀ ರಾಮನವಮಿ ಹಬ್ಬದಂದು ಬೆಂಗಳೂರಿನಲ್ಲಿ ಮಾರ್ಚ್ 30ರಂದು ಗುರುವಾರ ಮಾಂಸ ಮಾರಾಟ ನಿಷೇಧಿಸಲಾಗಿತ್ತು.
