ಚುನಾವಣೆಗೆ ಇನ್ನು ಕೇವಲ 8 ದಿನವಷ್ಟೇ ಬಾಕಿಯಿದ್ದು, ಇಂದು ಕಲಬುರಗಿ (Kalaburagi) ಜಿಲ್ಲೆಗೆ ಪ್ರಧಾನಿ ಮೋದಿ (PM Narendra Modi) ಎಂಟ್ರಿ ನೀಡಲಿದ್ದಾರೆ. ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಪ್ರಭಾವ ಇರುವ ಕಲ್ಯಾಣ ಕರ್ನಾಟಕದಲ್ಲಿ ಮೋದಿ ಪ್ರಚಾರ ನಡೆಸಿ ಧೂಳೆಬ್ಬಿಸಲು ಬಿಜೆಪಿ ಪ್ಲಾನ್ ಮಾಡಿದೆ.
ಕಲಬುರಗಿ ರೋಡ್ ಶೋ ವೇಳೆ ಖರ್ಗೆಗೆ ಮತ್ತೆ ಕೌಂಟರ್ ಕೊಡಲು ಮೋದಿ ಪ್ಲಾನ್ ಮಾಡಿದ್ದು ಮತ್ತೊಮ್ಮೆ ವಿಷಸರ್ಪ ಹೇಳಿಕೆಗೆ ಮೋದಿಯಿಂದ ತಿರುಗೇಟು ನಿರೀಕ್ಷೆ ಇದೆ. ಕಲ್ಯಾಣ ಕರ್ನಾಟಕದಲ್ಲಿ ಗರಿಷ್ಠ ಕ್ಷೇತ್ರಗಳನ್ನು ವಶಕ್ಕೆ ಪಡೆಯಲು ಬಿಜೆಪಿ ಪಣ ಹೊಂದಿದ್ದು, ಲಿಂಗಾಯತರ ಪ್ರಾಬಲ್ಯದ ಜತೆಗೆ ಎಸ್ಸಿ, ಎಸ್ಟಿ ಇತರೇ ಹಿಂದುಳಿದ ವರ್ಗಗಳ ಅಹಿಂದ ಮತಗಳು ನಿರ್ಣಾಯಕವಾಗಲಿದೆ. ಇಂದು ಕಲಬುರಗಿ ಬಳಿಕ, ಮೇ 6 ರಂದು ಚಿತ್ತಾಪುರಗಳಲ್ಲಿ ಮೋದಿ ಮತಬೇಟೆ ನಡೆಸಲಿದ್ದಾರೆ.