ರಾಜ್ಯ ವಿಧಾನ ಸಭಾ ಚುನಾವಣೆಗೆ ಕೌಂಟ್ಡೌನ್ ಶುರುವಾಗಿದೆ. ರಾಜ್ಯಕ್ಕೆ ಇಂದು ನರೇಂದ್ರ ಮೋದಿ ಎಂಟ್ರಿ ಕೊಡ್ತಿದ್ದು ರಾಜಧಾನಿ ಬೆಂಗಳೂರು, ಚಿಕ್ಕಬಳ್ಳಾಪುರ, ದಾವಣಗೆರೆ ಸೇರಿ ಮಧ್ಯ ಕರ್ನಾಟಕದಲ್ಲಿ ಮತಬೇಟೆ ನಡೆಸಲಿದ್ದಾರೆ. ಕರುನಾಡಿನಲ್ಲಿ ಬಿಜೆಪಿ ಭದ್ರಕ್ಕೆ ಸೂತ್ರ ಹೆಣೆಯಲಾಗಿದೆ. ಸದ್ಯ ರಾಜ್ಯದಲ್ಲಿ ಮೋದಿ ರಂಗು ಮೇಲೈಸಿದೆ. ಎಲ್ಲೆಡೆ ಕೇಸರಿ ಬಾವುಟಗಳು ಹಾರಾಡುತ್ತಿವೆ.
ಮುದ್ದೇನಹಳ್ಳಿ ಗ್ರಾಮದ ಸತ್ಯಸಾಯಿ ಆಶ್ರಮಕ್ಕೆ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಗಮಿಸುತ್ತಿರುವ ಹಿನ್ನಲೆ ಮುದ್ದೇನಹಳ್ಳಿ ಗ್ರಾಮದಲ್ಲಿ ಪೊಲೀಸರು ಹೆಜ್ಜೆ ಹೆಜ್ಜೆಗೂ ಹೈ ಅಲರ್ಟ್ ಮಾಡಿದ್ದಾರೆ. ರಸ್ತೆಯುದ್ದಕ್ಕೂ ಬ್ಯಾರಿಕೇಡ್ ಹಾಕಿ ಭಾರಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.ದಾವಣಗೆರೆಯಲ್ಲಿ ಇವತ್ತು ಬಿಜೆಪಿ ಮಹಾಸಂಗಮ ಬೃಹತ್ ಸಮಾವೇಶ ನಡೆಯಲಿದೆ.