ಬಿಗ್ ಬಾಸ್ ಮಾಜಿ ಸ್ಪರ್ಧಿ, ಫ್ಯಾಷನ್ ತಾರೆ ಉರ್ಫಿ ಜಾವೇದ್ (Urfi Javed) ತನ್ನ ವಿಭಿನ್ನ ಉಡುಗೆಗಳಿಂದಲೇ ಫೇಮಸ್ ಆಗಿದ್ದಾರೆ. ಅದೇ ರೀತಿ ದೆಹಲಿಯಲ್ಲಿ ಯುವತಿಯೊಬ್ಬಳು ಬಿಕಿನಿ (Bikini) ತೊಟ್ಟು ದೆಹಲಿ ಮೆಟ್ರೋದಲ್ಲಿ ಸಂಚರಿಸಿರುವುದು ಕಂಡುಬಂದಿದೆ. ಎನ್ಸಿಎಂ ಇಂಡಿಯಾ ಕೌನ್ಸಿಲ್ ಫಾರ್ ಮೆನ್ ಅಫೇರ್ಸ್ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳಲಾದ ಸುಮಾರು 9 ಸೆಕೆಂಡುಗಳ ವೀಡಿಯೋದಲ್ಲಿ, ಯುವತಿ ಬಿಕಿನಿ ಧರಿಸಿ ಸಂಚರಿಸಿರುವುದು ಕಂಡುಬಂದಿದೆ. ಯುವತಿ ದೆಹಲಿ ಮೆಟ್ರೋದಲ್ಲಿ (Delhi Metro Girl) ಸಂಚರಿಸುತ್ತಿದ್ದ ವೇಳೆ ತೊಡೆಯ ಮೇಲೆ ಬ್ಯಾಗ್ ಇಟ್ಟುಕೊಂಡು ಕುಳಿತಿದ್ದಳು. ಆಕೆ ಎದ್ದು ನಿಂತಾಗ ಬಿಕಿನಿ ತೊಟ್ಟಿರುವುದು ಕಂಡಿದೆ. ತಕ್ಷಣವೇ ಚಾಲಾಕಿಯೊಬ್ಬ ವೀಡಿಯೋ ಸೆರೆಹಿಡಿದು ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ.