ಕೆಆರ್ ಪೇಟೆಯ ಹೆಚ್ಡಿ ರೇವಣ್ಣರ ಆಪ್ತ ಬಿಎಲ್ ದೇವರಾಜ್ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಕುಮಾರಸ್ವಾಮಿ ಆಪ್ತ ಹೆಚ್ಟಿ ಮಂಜುಗೆ ಟಿಕೆಟ್ ಘೋಷಣೆ ಮಾಡಿದ್ದರು.ಆದರೆ ದೇವರಾಜ್ ಹಾಗೂ ಅವರ ಬೆಂಬಲಿಗರು ಮಂಜುಗೆ ಟಿಕೆಟ್ ನೀಡದಂತೆ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೇ ದೇವರಾಜ್ ಅವರು ಬಂಡಾಯದ ಸಭೆಗಳು ನಡೆಸಿ ವರಿಷ್ಠರಿಗೆ ಎಚ್ಚರಿಕೆ ಸಂದೇಶವನ್ನೂ ನೀಡಿದ್ದರು.
ಆದರೆ ಜೆಡಿಎಸ್ ನಾಯಕರು ಮಾತ್ರ ಬಿ. ಎಲ್. ದೇವರಾಜ್ ಅವರ ಬಂಡಾಯಕ್ಕೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಅಲ್ಲದೇ ವರಿಷ್ಠರು ಅವರ ನಡೆಗೆ ಆಕ್ರೋಶವನ್ನೂ ವ್ಯಕ್ತಪಡಿಸಿದ್ದರು.ಆದರೀಗ ತಮ್ಮ ಬೇಡಿಕೆ ಒಪ್ಪದ, ಸಾಲದೆಂಬಂತೆ ವರಿಷ್ಠರ ಆಕ್ರೋಧಶದಿಂದ ಬೇಸತ್ತ ದೇವರಾಜ್ ಜೆಡಿಎಸ್ಗೆ ಬೆನ್ನು ಹಾಕಿ ಕಾಂಗ್ರೆಸ್ ಕೈ ಹಿಡಿಯಲಿದ್ದಾರೆ.ಆಕ್ರೋಶದ ಬೆನ್ನಲ್ಲೇ ಬಿಎಲ್ ದೇವರಾಜ್ ಟೀಮ್ ಕಾಂಗ್ರೆಸ್ ನಾಯಕರ ಜೊತೆ ಕಾಣಿಸಿಕೊಂಡಿದ್ದಾರೆ. ಚುನಾವಣಾ ಹೊಸ್ತಿಲಲ್ಲಿ ಜೆಡಿಎಸ್ನಲ್ಲಾದ ಈ ಬದಲಾವಣೆ ಪಕ್ಷಕ್ಕೆ ಹಿನ್ನಡೆಯುಂಟು ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ.