ಅಥಣಿ ಕ್ಷೇತ್ರದ ಟಿಕೆಟ್ ಹಂಚಿಕೆಯಲ್ಲಿ ಯಾವುದೇ ಗೊಂದಲ ಇಲ್ಲ. ಪಕ್ಷ ಸೂಕ್ತ ಸಮಯದಲ್ಲಿ ಸರಿಯಾದ ನಿರ್ಧಾರ ಕೈಗೊಳ್ಳಲಿದೆ. ಟಿಕೆಟ್ ಹಂಚಿಕೆಯಲ್ಲಿ ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ ಎಂದು ಮಹೇಶ ಕುಮಟಳ್ಳಿ (Mahesh Kumathalli) ಬೆಳಗಾವಿಯಲ್ಲಿ (Belagavi) ಹೇಳಿದರು.
ಅಥಣಿ (Athani) ಬಿಜೆಪಿ (BJP) ಟಿಕೆಟ್ಗಾಗಿ ಲಕ್ಷ್ಮಣ ಸವದಿ (Laxman Savadi) ಹಾಗೂ ಮಹೇಶ ಕುಮಟಳ್ಳಿ ನಡುವೆ ಪೈಪೋಟಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಪಕ್ಷ ಸೂಕ್ತ ನಿರ್ಧಾರ ಕೈಗೊಳ್ಳಲಿದೆ. ಲಕ್ಷ್ಮಣ ಸವದಿ ಅಥಣಿ ಟಿಕೆಟ್ ಕೇಳಿದ್ದಾರೆ ಎಂಬ ವರದಿಯನ್ನು ನಾನೂ ಗಮನಿಸಿದ್ದೇನೆ. ಆದರೆ ಅಥಣಿ ಟಿಕೆಟ್ ಬೇಕು ಎಂದು ಲಕ್ಷ್ಮಣ ಸವದಿ ಮಾಧ್ಯಮದ ಎದುರು ಹೇಳಿಲ್ಲ. ಲಕ್ಷ್ಮಣ ಸವದಿ ಟಿಕೆಟ್ ಕೇಳಿರುವ ವಿಚಾರವೂ ನನ್ನ ಗಮನಕ್ಕೆ ಬಂದಿಲ್ಲ ಎಂದರು.