ತೆಲುಗು ಚಿತ್ರರಂಗದ ಖ್ಯಾತ ನಟಿ ಕಾಕಿನಾಡು ಶ್ಯಾಮಲಾ ಸಂದರ್ಶನವೊಂದರಲ್ಲಿ ಮದುವೆಗೂ ಮುನ್ನ ಖುಷ್ಬೂಗೆ ಇದ್ದ ಮೊದಲ ಸಂಬಂಧದ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಕಾಕಿನಾಡ ಶ್ಯಾಮಲಾ ಅವರು ಪ್ರಭು- ಖೂಷ್ಬೂ ಸಂಬಂಧದ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಖುಷ್ಬೂ ತುಂಬಾ ಒಳ್ಳೆಯ ವ್ಯಕ್ತಿ, ಖುಷ್ಬೂ- ಪ್ರಭು ಇಬ್ಬರು ಒಬ್ಬರನೊಬ್ಬರು ಪ್ರೀತಿಸಿ ಮದುವೆಯಾದರು. ಇವರಿಬ್ಬರ ಮದುವೆಗೆ ಪ್ರಭು ಕುಟುಂಬದಲ್ಲಿ ಆಕ್ಷೇಪವಿದ್ದ ಕಾರಣ ಇಬ್ಬರೂ ಬೇರೆಯಾದರು ಎಂದು ಶ್ಯಾಮಲಾ ಮಾತನಾಡಿದ್ದಾರೆ.
ಮುಂಬೈನಲ್ಲಿ ಜನಿಸಿದ ಖುಷ್ಬೂ ಅವರು 90ರ ದಶಕದಲ್ಲಿ ಕಾಲಿವುಡ್ನಲ್ಲಿ ಸ್ಟಾರ್ ನಾಯಕಿಯಾಗಿ ಬೆಳೆದರು. ಹಿಂದಿಯ ಜೊತೆಗೆ ಬಹುಭಾಷಾ ತಾರೆ ಎನಿಸಿಕೊಂಡಿದ್ದಾರೆ. 1991ರಲ್ಲಿ ಖುಷ್ಬೂ ಮತ್ತು ಪ್ರಭು ‘ಚಿನ್ನಿ ತಂಬಿ’ ಚಿತ್ರದಲ್ಲಿ ನಟಿಸಿದ್ದರು. ಈ ವೇಳೆ ಇಬ್ಬರ ನಡುವೆ ಪ್ರೀತಿ ಚಿಗುರೊಡೆದಿತ್ತು ಎಂದು ಶ್ಯಾಮಲಾ ಹೇಳಿದ್ದಾರೆ.