ಯಗಾದಿ ಹಬ್ಬಕ್ಕೆ ಪ್ರಯುಕ್ತ ಕಿರಣ್ ರಾಜ್ ನಟನೆಯ ರಾನಿ ಸಿನಿಮಾದ ಪೋಸ್ಟರ್ ರಿಲೀಸ್ ಆಗಿದೆ. ಪೋಸ್ಟರ್ ನಲ್ಲಿ ಕಿರಣ್ ರಾಜ್ ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಸ್ಟಾರ್ ಕ್ರಿಯೇಷನ್ಸ್ ಮೂಲಕ ಚಂದ್ರಕಾಂತ್ ಪೂಜಾರಿ, ಉಮೇಶ್ ಹೆಗ್ಡೆ ನಿರ್ಮಿಸಿರುವ, ಗುರುತೇಜ್ ಶೆಟ್ಟಿ ಕಥೆ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.
ಕಿರಣ್ ರಾಜ್ 13,000 ಅಡಿ ಎತ್ತರದಿಂದ ಜಿಗಿದು ಟೈಟಲ್ ಬಿಡುಗಡೆ ಮಾಡಿ ಚಿತ್ರರಂಗ ಹಾಗೂ ಪ್ರೇಕ್ಷಕರಿಂದ ಪ್ರಶಂಸೆ ಪಡೆದುಕೊಂಡಿದ್ದರು. ಈಗ ಬಿಡುಗಡೆಯಾಗಿರುವ ಮಾಸ್ ಲುಕ್ ಪೋಸ್ಟರ್ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ಕಿರಣ್ ರಾಜ್ ಚಿತ್ರದಲ್ಲಿ ಭರ್ಜರಿ ಫೈಟ್ಸ್ ಮಾಡಿದಾರಂತೆ, ಚಿತ್ರದಲ್ಲಿ 6 ಸಾಹಸ ಸನ್ನಿವೇಶಗಳಿದೆ. ‘ರಾನಿ’ ಚಿತ್ರಕ್ಕಾಗಿ 7 ಸೆಟ್ ಗಳನ್ನು ಹಾಕಲಾಗಿದ್ದು, ಈಗಾಗಲೇ 5 ಸೆಟ್ ಗಳಲ್ಲಿ ಚಿತ್ರಿಕರಣ ಮುಗಿದಿದೆ.