ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಯಾರು ಸ್ಪರ್ಧೆ ಮಾಡಬೇಕು? ಈ ವಿಚಾರ ಕಳೆದ 2 ತಿಂಗಳಿಂದ ಗೊಂದಲದ ಗೂಡಾಗಿದೆ. ಭವಾನಿ ಅವರಿಗೇ ಟಿಕೆಟ್ ಕೊಡಿ ಅಂತಾ ರೇವಣ್ಣ ಪಟ್ಟು ಹಿಡಿದಿದ್ದರೆ, ಕುಮಾರಸ್ವಾಮಿ ಮಾತ್ರ ಸ್ವರೂಪ್ ಅವರಿಗೇ ಟಿಕೆಟ್ ಸಿಗಬೇಕು ಅಂತಾ ಹೇಳ್ತಿದ್ದಾರೆ. ಅಂತಿಮವಾಗಿ ಈ ವಿಚಾರ ದೇವೇಗೌಡರ ಅಂಗಳ ತಲುಪಿದೆ. ಆದ್ರೆ, ದೇವೇಗೌಡರೇ ಮಧ್ಯ ಪ್ರವೇಶ ಮಾಡಿದ್ರೂ ಈ ವಿವಾದ ಬಗೆಹರಿದಿಲ್ಲ! ಅಂತಾದ್ದೇನಾಯ್ತು? ಈ ಗೊಂದಲ ಬಗೆಹರಿಯೋದಾದ್ರೂ ಹೇಗೆ?
ಏಪ್ರಿಲ್ 2 ಭಾನುವಾರ ರಾತ್ರಿ ದೇವೇಗೌಡರ ಮನೆಯಲ್ಲಿ ಕಾವೇರಿದ ಚರ್ಚೆ.. ವಾದ – ಪ್ರತಿವಾದ. ಇವೆಲ್ಲ ನಡೆದದ್ದು, ಕೇವಲ ಹಾಸನ ಕ್ಷೇತ್ರದ ಜೆಡಿಎಸ್ ಟಿಕೆಟ್ ವಿಚಾರವಾಗಿ.. ಭವಾನಿ ಅವರಿಗೇ ಹಾಸನ ಕ್ಷೇತ್ರದ ಟಿಕೆಟ್ ಕೊಡಬೇಕು ಅನ್ನೋದು ರೇವಣ್ಣ ಆಗ್ರಹ. ಆದ್ರೆ, ಪಕ್ಷಕ್ಕಾಗಿ ದುಡಿದಿರುವ ಸ್ವರೂಪ್ ಪ್ರಕಾಶ್ಗೆ ಟಿಕೆಟ್ ಸಿಗಬೇಕು ಅನ್ನೋದು ಕುಮಾರಸ್ವಾಮಿ ನಿಲುವು.. ಅಂತಿಮವಾಗಿ ದೇವೇಗೌಡರೂ ಕೂಡಾ ಸ್ವರೂಪ್ ಪರ ವಾಲುತ್ತಿದ್ದಂತೆಯೇ ರೇವಣ್ಣ ಹೊಸ ಅಸ್ತ್ರ ಪ್ರಯೋಗ ಮಾಡಿದರು. ಒಂದು ವೇಳೆ ಭವಾನಿ ಅವರಿಗೆ ಟಿಕೆಟ್ ಕೊಡಲ್ಲ ಅನ್ನೋದಾದ್ರೆ, ಸ್ವರೂಪ್ಗೂ ಟಿಕೆಟ್ ಕೊಡಬೇಡಿ ಅನ್ನೋದು ರೇವಣ್ಣ ನಿಲುವು. ನಮಗೆ ಸಿಗದ ಟಿಕೆಟ್ ಅವರಿಗೂ ಸಿಗಬಾರದು ಅನ್ನೋದು ರೇವಣ್ಣ ನಿಲುವು.. ಮೂರನೇ ಅಭ್ಯರ್ಥಿಯನ್ನ ಹುಡುಕಿ ಅವರಿಗೆ ಟಿಕೆಟ್ ಕೊಡಿ ಅಂತಾ ಹೊಸ ಅಸ್ತ್ರವನ್ನ ಪ್ರಯೋಗಿಸಿದ್ದಾರೆ ರೇವಣ್ಣ.. ಈ ಮೂಲಕ ನಾನು ಸೋಲಬೇಕು ಅಂತಾದ್ರೆ ಕುಮಾರಸ್ವಾಮಿಯೂ ಸೋಲಬೇಕು ಅನ್ನೋದು ರೇವಣ್ಣ ತಂತ್ರಗಾರಿಕೆ..