ಬಿಜೆಪಿ ವಿರುದ್ಧ ಮಾಜಿ ಸಿಎಂ ಜಗದೀಶ್ ಶೆಟ್ಟರ್ ‘ಲಿಂಗಾಯತ ಅಸ್ತ್ರ’ ಪ್ರಯೋಗಿಸಿದ್ದಾರೆ. ಬೆಳಗಾವಿಯಲ್ಲಿ ಲಿಂಗಾಯತ, ಮುಸ್ಲಿಂ ಸಮುದಾಯದ ಮುಖಂಡರ ಸಭೆ ನಡೆಸಿದ ಜಗದೀಶ್ ಶೆಟ್ಟರ್(Jagdish Shetter), ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಬಿಜೆಪಿ ಲಿಂಗಾಯತ ಸಮುದಾಯ ಬೆಂಬಲದಿಂದ ಅಧಿಕಾರಕ್ಕೆ ಬಂದಿತ್ತು. ಇವತ್ತು ಆ ಲಿಂಗಾಯತ ಸಮುದಾಯವನ್ನ, ನಾಯಕತ್ವ ತಗೆದು ಹಾಕುವ ಹಿಡನ್ ಅಜೆಂಡಾ ಇದೆ. ಇದನ್ನು ಸಮಾಜ ಬಾಂಧವರು ಅರ್ಥ ಮಾಡಿಕೊಳ್ಳಬೇಕು.
ಇದು ಜಗದೀಶ್ ಶೆಟ್ಟರ್ ಒಬ್ಬನ ವೈಯಕ್ತಿಕ ಪ್ರಶ್ನೆ ಅಲ್ಲ. ನಾನು ಈಗಾಗಲೇ ಆರು ಬಾರಿ ಆರಿಸಿ ಬಂದಿದ್ದೇನೆ, ಸಿಎಂ ಆಗಿದ್ದೇನೆ. ಮುಂದೇನು ಆಗಬೇಕು ಅಂತಾ ನನಗೇನೂ ಇಲ್ಲ. ಆದರೆ ಸಮಾಜದ ಹಿತದೃಷ್ಟಿಯಿಂದ ಹೇಳುತ್ತೇನೆ ನೀವು ಎಚ್ಚರವಾಗಿರಿ. ಮುಂದೆ ಗಂಡಾಂತರ ಇದೆ, ಹೀಗಾಗಿ ಇಂದು ಕಾಂಗ್ರೆಸ್ಗೆ ಬೆಂಬಲ ಕೊಡಿ. ಇವರಿಗೆ ಪಾಠ ಕಲಿಸೋಣ, ಆಗ ಇವರು ಎಚ್ಚರ ಆಗುತ್ತಾರೆ. ಇಲ್ಲವಾದರೆ ಇದೇ ರೀತಿ ಸರ್ವಾಧಿಕಾರ ಪ್ರವೃತ್ತಿ ಮುಂದುವರಿಯುತ್ತದೆ ಎಂದರು.