ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡದ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್ ಅನಾರೋಗ್ಯದ ಹೊರತಾಗಿಯೂ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಬ್ಯಾಟ್ ಮಾಡಿದ್ದರು ಎಂದು ಆರ್ಸಿಬಿ (RCB)ಕೋಚ್ ಸಂಜಯ್ ಬಾಂಗರ್ ಪಂದ್ಯದ ಬಳಿಕ ಬಹಿರಂಗಪಡಿಸಿದ್ದಾರೆ.
ಔಟ್ ಆಗಿ ಡಗ್ಔಟ್ಗೆ ಮರಳುತ್ತಿದ್ದ ವೇಳೆ ದಿನೇಶ್ ಕಾರ್ತಿಕ್ (Dinesh Karthik)ಹಲವು ಬಾರಿ ಕೆಮ್ಮಿದ್ದರು ಹಾಗೂ ವಾಂತಿ ಕೂಡ ಮಾಡಿಕೊಂಡಿದ್ದರು. ಅಂದ ಹಾಗೆ ಪಂದ್ಯದ ಬಳಿಕ ಆರ್ಸಿಬಿ ಕೋಚ್ ಸಂಜಯ್ ಬಾಂಗರ್ ಅವರು ದಿನೇಶ್ ಕಾರ್ತಿಕ್ ಆರೋಗ್ಯದ ಬಗ್ಗೆ ಮಾಹಿತಿ ಒದಗಿಸಿದರು. ಕಾರ್ತಿಕ್ ಆನಾರೋಗ್ಯದ ಹೊರತಾಗಿಯೂ ಕ್ರೀಸ್ಗೆ ತೆರಳಿ ಬ್ಯಾಟ್ ಮಾಡಿದ್ದಾರೆ ಎಂದು ಹೇಳಿದ್ದಾರೆ.