- ನೀವು ಎಲ್ಲಿಗಾದರೂ ಹೊರಗೆ ಹೋಗಲು ತಯಾರಾಗುವಾಗ ಮೊದಲು ನಿಮ್ಮ ತ್ವಚೆಗೆ ನೇರವಾಗಿ ಫೌಂಡೇಶನ್ ಹಾಕುತ್ತೀರಾ? ಈ ರೀತಿ ಮಾಡುವುದು ತಪ್ಪು. ಫೌಂಡೇಶನ್ ಹಾಕುವ ಮೊದಲು ನೀವು ತಣ್ಣೀರಿನಲ್ಲಿ ಮುಖವನ್ನು ತೊಳೆಯಬೇಕು. ನಂತರ ಮುಖವನ್ನು ಡ್ರೈ ಮಾಡಬೇಕು. ಆದಾದ ಬಳಿಕ ನಿಮ್ಮ ಸ್ಕಿನ್ಗೆ ತಕ್ಕಂತೆ ಫೌಂಡೇಶನ್ ಹಾಕಿಕೊಳ್ಳಿ.
- ಹಾಕಿರುವ ಮೇಕಪ್ ಯಾವುದೇ ರೀತಿಯಲ್ಲಿ ಕ್ರ್ಯಾಕ್ ಆಗಬಾರದು ಹಾಗೂ ಹೆಚ್ಚಿನ ಸಮಯವಿರಬೇಕೆಂದು ಫೌಂಡೇಶನ್ ಹಾಕಲಾಗುತ್ತದೆ.
- ನೀವು ಫೌಂಡೇಶನ್ ಖರೀದಿಸಲು ಹೋಗುವಾಗ ನಿಮ್ಮ ಸ್ಕಿನ್ ಟೋನ್ಗೆ ತಕ್ಕಂತೆ ಇರಬೇಕು. ನಿಮ್ಮ ಸ್ಕಿನ್ಗೆ ಒಂದು ಟೋನ್ ಲೈಟ್ ಹಾಗೂ ಒಂದು ಟೋನ್ ಜಾಸ್ತಿ ಇರುವುದನ್ನು ಖರೀದಿಸಬೇಡಿ. ಫೌಂಡೇಶನ್ ಹಾಕಿದ ನಂತರ ಸ್ಪಂಜ್ ಬಳಸಿ ನಿಮ್ಮ ಮೇಕಪ್ ಸೆಟ್ ಮಾಡಿಕೊಳ್ಳಿ.
- ಫೌಂಡೇಶನ್ ಹಾಕಿದ ನಂತರ ನಿಮ್ಮ ಮುಖಕ್ಕೆ ಕಾಂಪ್ಯಾಕ್ಟ್ ಪೌಡರ್ ಹಚ್ಚಿಕೊಳ್ಳಿ. ಕಾಂಪ್ಯಾಕ್ಟ್ ಪೌಡರ್ ಅನ್ನು ನಿಮ್ಮ ತ್ವಚೆಗೆ ಹೆಚ್ಚು ಹಚ್ಚಿಕೊಳ್ಳಬೇಡಿ. ಕಾಂಪ್ಯಾಕ್ಟ್ ಪೌಡರ್ ನನ್ನು ಕೇವಲ ಮುಖದ ಕಾರ್ನರ್ ನಲ್ಲಿ ಕೈನಿಂದ ಲೈಟಾಗಿ ಹಚ್ಚಿಕೊಳ್ಳಿ.
- ಇದಾದ ಬಳಿಕ ಕಣ್ಣಿನ ಮೇಕಪ್ ಮಾಡಿಕೊಳ್ಳಿ. ಕಣ್ಣಿನ ಮೇಕಪ್ ಮಾಡುವಾಗ ಕಣ್ಣನ್ನು ಸಂಪೂರ್ಣ ಕವರ್ ಮಾಡುವ ಅವಶ್ಯಕತೆ ಇಲ್ಲ.
- ಕೊನೆಯಲ್ಲಿ ನೀವು ಲಿಪ್ಸ್ಟಿಕ್ ಹಚ್ಚಿಕೊಳ್ಳಿ. ಲಿಪ್ಸ್ಟಿಕ್ ಹಚ್ಚಿಕೊಳ್ಳುವಾಗ ಸ್ಕಿನ್ ಮೇಲೆ ಹಚ್ಚಿಕೊಳ್ಳಬೇಡಿ. ಮೊದಲು ತುಟಿಯ ಮೇಲೆ ಲಿಪ್ ಬಾಮ್ ಹಚ್ಚಿ ನಂತರ ಲಿಪ್ಸ್ಟಿಕ್ ಹಚ್ಚಿ. ಈ ರೀತಿ ಮಾಡುವುದರಿಂದ ನಿಮ್ಮ ಲಿಪ್ಸ್ಟಿಕ್ ಹೆಚ್ಚಿನ ಸಮಯ ಇರುತ್ತದೆ.