ನಟ ಸುದೀಪ್ (Kichcha Sudeepa) ಅವರು ಸಿಎಂ ಬೊಮ್ಮಾಯಿ (BasavarajBommai) ಪರ ಪ್ರಚಾರ ಮಾಡೋದ್ರಿಂದ ನಮಗೇನು ತೊಂದರೆ ಇಲ್ಲ. ಸುದೀಪ್ ಪ್ರಚಾರಕ್ಕೆ ಹೆಚ್ಚು ಮಹತ್ವ ಕೊಡಬೇಕಿಲ್ಲ ಅಂತಾ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ತಿಳಿಸಿದ್ದಾರೆ.
ನಟ ಸುದೀಪ್ ಬೆಂಬಲದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಹಿಂದಿನಿಂದಲೂ ವಿಶ್ವಾಸದ ಮೇಲೆ ಹಲವು ನಟರು ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಹೋಗ್ತಾರೆ, ಅದು ಮಾಮೂಲಿಯಾಗಿ ನಡೆಯುತ್ತಿದೆ. ಬೊಮ್ಮಾಯಿ ಮೇಲಿನ ವಿಶ್ವಾಸದಲ್ಲಿ ಸುದೀಪ್ ಪ್ರಚಾರ ಮಾಡ್ತೀನಿ ಅಂತಾ ಹೇಳಿದ್ದಾರೆ. ಇದು ಅವರ ನಡುವೆ ಇರುವ ವೈಯಕ್ತಿಕ ಸಂಬಂಧಗಳು. ಅದಕ್ಕೆ ಹೆಚ್ಚು ಮಹತ್ವದ ಕೊಡುವ ಅವಶ್ಯಕತೆ ಇಲ್ಲ ಎಂದಿದ್ದಾರೆ.