ಹಾಲಿವುಡ್ ಖ್ಯಾತ ನಟಿ, ಆಸ್ಕರ್ ಪ್ರಶಸ್ತಿ ವಿಜೇತೆ ಹಾಲೆ ಬೆರ್ಯೆ ಇದೀಗ ಬೆತ್ತಲೆ ಫೋಟೋವನ್ನು ಶೇರ್ ಮಾಡಿ ಸುದ್ದಿಯಾಗಿದ್ದಾರೆ. ನಟಿಯ ಈ ಫೋಟೋಗೆ ಕೆಲವರು ಮೆಚ್ಚುಗೆ ವ್ಯಕ್ತ ಪಡಿಸಿದ್ದರೆ, ಇನ್ನೂ ಕೆಲವರು ನೆಗೆಟಿವ್ ಕಾಮೆಂಟ್ ಮಾಡಿದ್ದಾರೆ.
ಈ ಹಿಂದೆಯೂ ಹಾಲೆ ತಮ್ಮ ಬೆತ್ತಲೆ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸುದ್ದಿಯಾಗಿದ್ದು ಈ ಭಾರಿಯೂ ಅದನ್ನೇ ಮುಂದುವರೆಸಿದ್ದಾರೆ. ಬಾಲ್ಕನಿಯಲ್ಲಿ ಬೆತ್ತಲೆಯಾಗಿ ನಿಂತು, ಕೈಯಲ್ಲಿ ವೈನ್ ಗ್ಲಾಸ್ ಹಿಡಿದುಕೊಂಡಿರುವ ಫೋಟೋವನ್ನು ಟ್ವೀಟರ್ ನಲ್ಲಿ ಶೇರ್ ಮಾಡಿರುವ ನಟಿ, ‘ಅಂದುಕೊಂಡಿದ್ದನ್ನು ಮಾಡುತ್ತೇನೆ’ ಎಂಬ ಕ್ಯಾಪ್ಷನ್ ಕೊಟ್ಟಿದ್ದಾರೆ.