ಗದಗ: ನಿರೀಕ್ಷೆಯಂತೆ ಜಿಲ್ಲೆಯ ಗದಗ (Gadag Constituency), ರೋಣ (Rona Constituency) ಹಾಗೂ ನರಗುಂದ ವಿಧಾನಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್ನಿಂದ ಅಭ್ಯರ್ಥಿಗಳ ಪಟ್ಟಿ (Congress Candidate List) ಘೋಷಣೆಯಾಗಿದ್ದು, ಶಿರಹಟ್ಟಿ ಕ್ಷೇತ್ರ ಮಾತ್ರ ಗೌಪ್ಯವಾಗಿ ಉಳಿದಿದೆ.
ಕಾಂಗ್ರೆಸ್ (Congress) ಮೊದಲ ಹಾಗೂ 2ನೇ ಪಟ್ಟಿ ಬಿಡುಗಡೆ ಆಗುತ್ತಿದ್ದಂತೆ ಇತರ ಪ್ರಬಲ ಟಿಕೆಟ್ ಆಕಾಂಕ್ಷಿಗಳಲ್ಲಿ ತಳಮಳ ಶುರುವಾಗಿದೆ. ಅವರವರ ರಾಜಕೀಯ ಗಾಡ್ ಫಾದರ್, ಮಠಾಧೀಶರ ಮೂಲಕ ರಾಜ್ಯ ಮುಖಂಡರ ಒತ್ತಡ ಹೇರುವ ಪ್ರಕ್ರಿಯೆ ತೀತ್ರಗೊಂಡಿದೆ. ಪ್ರಬಲ ಟಿಕೆಟ್ ಆಕಾಂಕ್ಷಿಗಳು ಸ್ವಪಕ್ಷೀಯರ ವಿರುದ್ಧವೇ ಕ್ಷೇತ್ರದಲ್ಲಿ ಅಪಪ್ರಚಾರಕ್ಕೆ ಕೈಹಾಕಿದ್ದಾರೆ. ಪ್ರತಿಸ್ಪರ್ಧಿಯ ನೈತಿಕ ಬಲ ಕುಗ್ಗಿಸುವ ಚಾಣಾಕ್ಷ ರಾಜಕೀಯ ನಡೆ ಎಗ್ಗಿಲ್ಲದೇ ಸಾಗಿದೆ. ಆಕಾಂಕ್ಷಿಗಳ ಪರ ಜಿಲ್ಲಾ ಪ್ರಭಾವಿ ಮುಖಂಡರು ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿರುವುದೂ ಅಲ್ಲಗೆಳೆಯುವಂತಿಲ್ಲ.